ಭೇಟಿ ಬಳಿಕ ಹೊರ ಬಂದ ಸೋಮಣ್ಣ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕಿ ಮಾಧ್ಯಮಗಳ ಕ್ಯಾಮರ ನೋಡಿ ನಕ್ಕರು. ಈ ಸುದ್ದಿಯೇ ಬೇರೆ ಆಗುತ್ತೆ, ಬೇರೆಯೇ ವ್ಯಾಖ್ಯಾನ ಆಗುತ್ತೆ ಎಂದು ಸಿದ್ದರಾಮಯ್ಯ ನಕ್ಕರು.

ಬೆಂಗಳೂರು (ಫೆ.03): ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ವಿ‌. ಸೋಮಣ್ಣ ಕಾಂಗ್ರೆಸ್​​ ಸೇರ್ತಾರೆ ಎಂಬ ಸುದ್ದಿ ಹರಿದಾಡ್ತಾನೆ ಇದೆ.

ಇದಕ್ಕೆ ಪುಷ್ಠಿ ನೀಡುವಂತೆ ಸೋಮಣ್ಣ ಇವತ್ತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದರು.

ಭೇಟಿ ಬಳಿಕ ಹೊರ ಬಂದ ಸೋಮಣ್ಣ ಹೆಗಲ ಮೇಲೆ ಸಿದ್ದರಾಮಯ್ಯ ಕೈ ಹಾಕಿ ಮಾಧ್ಯಮಗಳ ಕ್ಯಾಮರ ನೋಡಿ ನಕ್ಕರು. ಈ ಸುದ್ದಿಯೇ ಬೇರೆ ಆಗುತ್ತೆ, ಬೇರೆಯೇ ವ್ಯಾಖ್ಯಾನ ಆಗುತ್ತೆ ಎಂದು ಸಿದ್ದರಾಮಯ್ಯ ನಕ್ಕರು.

ಆಗ ಸೋಮಣ್ಣ, ಅಯ್ಯೋ ವ್ಯಾಖ್ಯಾನ ಹೋಗಲಿ, ಆಮೇಲೆ ನನ್ನ ಕಥೆ ಹೇಳಿ ಎಂದರು.

ಮಾಡೋದು ಮಾಡಲಿ ಬಿಡು, ನಾನೂ ಹಾಗೆಯೇ ಹೇಳಿದ್ದೇನೆ, ನೀನು ಚೆನ್ನಾಗೇ ಹೇಳಿದ್ದಿಯಾ ಎಂದು ನಗುತ್ತಾ ಸಿದ್ದರಾಮಯ್ಯ ತೆರಳಿದರು.