ಮೋದಿ ಭಾಷಣಕ್ಕೆ ‘ಸಂತೋಷ’ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ!

First Published 7, Feb 2018, 5:51 PM IST
Cm Siddaramaiah Reacts To PM Modis Speech
Highlights
  • ಬಜೆಟ್ ಭಾಷಣದಲ್ಲಿ ಕಾಂಗ್ರೆಸ್, ಖರ್ಗೆ ವಿರುದ್ಧ ಮೋದಿ ವಾಗ್ದಾಳಿ
  • ಭಾಷಣದಲ್ಲಿ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದ ಮೋದಿ

ಬೆಂಗಳೂರು: ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾಡಿರುವ ಭಾಷಣಕ್ಕೆ ‘ಸಂತೋಷ’ ವ್ಯಕ್ತಪಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಮೋದಿಯವರೇ, ನೀವಿಂದು ಸಂಸತ್ತಿನಲ್ಲಿ ನನ್ನನ್ನು ಸ್ಮರಿಸಿದ್ದೀರಿ. ಅದೇ ರೀತಿ ಬಸವಣ್ಣರನ್ನು ಸ್ಮರಿಸಿರುವುದು ಸಂತೋಷ ತಂದಿದೆ. ‘ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ’ ಎಂದು ಬಸವಣ್ಣ ಹೇಳಿದ್ದಾರೆ. ನೀವು ಬಸವಣ್ಣನ ತತ್ವಗಳನನ್ನು ಪಾಲಿಸಿದರೆ ಕನ್ನಡಿಗರು ಧನ್ಯವಾದ ಹೇಳುತ್ತಾರೆ, ಎಂದು ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ಇಂದು ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಕೂಡಾ ಪ್ರಸ್ತಾಪಿಸಿದ್ದರು.

loader