ರಾಜ್ಯ ಸರ್ಕಾರ ಅಥವಾ ತಮ್ಮ ಕುಟುಂಬದವರು ಏನಾದರೂ ಭ್ರಷ್ಟಾಚಾರ ನಡೆಸಿದ್ದರೆ, ಆ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಿ. ವೃಥಾ ಆರೋಪ ಸಲ್ಲದು. ಬೇಕಿದ್ದರೆ, ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು(ಸೆ.14): ರಾಜ್ಯ ಸರ್ಕಾರ ಅಥವಾ ತಮ್ಮ ಕುಟುಂಬದವರು ಏನಾದರೂ ಭ್ರಷ್ಟಾಚಾರ ನಡೆಸಿದ್ದರೆ, ಆ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಿ. ವೃಥಾ ಆರೋಪ ಸಲ್ಲದು. ಬೇಕಿದ್ದರೆ, ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ವಿಧಾನಸೌಧ ಮುಂಭಾಗ ನಡೆದ ಸಮಾರಂಭವೊಂದರ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ತಮ್ಮ ಪುತ್ರ ಭ್ರಷ್ಟಾಚಾರ ಮಾಡಿದ್ದರೆ ಅದಕ್ಕೆ ಪೂರಕವಾದ ದಾಖಲೆ ಬಿಡುಗಡೆ ಮಾಡಲಿ. ಇಂತಹ ಆರೋಪ ಮಾಡುವ ಯಡಿಯೂರಪ್ಪ ಮೊದಲು ತಮ್ಮ ಮೇಲೆ ಇರುವ ಆರೋಪಗಳಿಂದ ಮುಕ್ತರಾಗಲಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮುಖಂಡರು ತಮ್ಮ ಸರ್ಕಾರದ ವಿರುದ್ಧ ಯಾವುದೇ ಆಧಾರ, ದಾಖಲೆ ಇಲ್ಲದೇ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತವರೇ ನಮ್ಮ ಬಗ್ಗೆ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ, ಬಿಜೆಪಿ ರಾಜ್ಯ ಸಹ ಉಸ್ತುವಾರಿಯಾಗಿರುವ ಮುರಳೀ‘ರರಾವ್ ಅವರು ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಹ ಸಿದ್ಧ ಎಂದರು.
ರಾಹುಲ್ ಗಾಂಧಿ ಈ ದೇಶದ ಪ್ರಧಾನ ಮಂತ್ರಿಯಾಗುವುದು ತಿರುಕನ ಕನಸು ಎಂಬ ಯಡಿಯೂರಪ್ಪ ಅವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರದ್ದು ಬಾಲಿಶತನದ ಹೇಳಿಕೆ. ರಾಜೀವ್ ಗಾಂಧಿ ಚಿಕ್ಕ ವಯಸ್ಸಿಗೆ ಪ್ರಭಾನಿ ಆಗಿರಲಿಲ್ಲವೇ? ಯಾವ ಆಧಾರದ ಮೇಲೆ ಪ್ರಧಾನಿ ಆಗಲ್ಲ ಎಂದು ಹೇಳುತ್ತಾರೆ ಎಂದು ಮರು ಪ್ರಶ್ನಿಸಿದರು.
