ಮಾತೃಭಾಷೆಯಾದ ಕನ್ನಡವನ್ನು ಜಾರಿಗೆ ತರಲು ಸರ್ಕಾರ ಕಟಿಬದ್ಧವಾಗಿದೆ. ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಜಾರಿಯಾಗಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೆ ಬಂದ ತಕ್ಷಣವೇ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಬರೆದೆ.
ಬೆಂಗಳೂರು(ನ.01): ಮಾತೃಭಾಷೆಯಲ್ಲಿಯೇ ಶಿಕ್ಷಣ ಜಾರಿಗೆ ಬರಬೇಕು ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದೆ. ಇದರ ಬಗ್ಗೆ ಗಮನ ಹರಿಸಬೇಕೆಂದು ಪ್ರಧಾನಿಗೆ ಎರಡು ಪತ್ರ ಬರೆದರೂ ಅವರಿಂದ ಯಾವುದೇ ಬರವಸೆ ಸಿಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಮಾತೃಭಾಷೆಯಾದ ಕನ್ನಡವನ್ನು ಜಾರಿಗೆ ತರಲು ಸರ್ಕಾರ ಕಟಿಬದ್ಧವಾಗಿದೆ. ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಜಾರಿಯಾಗಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೆ ಬಂದ ತಕ್ಷಣವೇ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಬರೆದೆ. ಇದು ಕನ್ನಡಕ್ಕೆ ಮಾತ್ರ ಒದಗಿದ ಆಪತ್ತಲ್ಲ. ಎಲ್ಲಾ ರಾಜ್ಯಗಳಿಗೆ ಬಂದ ಕುತ್ತು. ಈ ಬಗ್ಗೆ ಪ್ರಧಾನಿ ಗಮನ ಹರಿಸಬೇಕು ಎಂದು ಹೇಳಿದೆ. ಆದರೆ ಎರಡು ಬಾರಿ ಪತ್ರ ಬರೆದರೂ ಮೋದಿಯಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಈಗ ಮೋದಿಗೆ ಮತ್ತೊಮ್ಮೆ ಪತ್ರ ಬರೆಯುವೆ ಎಂದು ಪ್ರಧಾನಿ ವಿರುದ್ಧ ಸಿಎಂ ಅಸಮಧಾನ ವ್ಯಕ್ತಪಡಿಸಿದ್ದಾರೆ.
