ಸಿಎಂ ಬೆಳ್ಳಿ ಉಡುಗೊರೆ ಮಲೆಮಹಾದೇಶ್ವರಗೆ

First Published 14, Jan 2018, 8:31 AM IST
CM Siddaramaiah Offers All The Gifts He Received To Lord Shiva
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಪಡೆದ ಬೆಳ್ಳಿಯ ಉಡುಗೊರೆಗಳನ್ನು ಮಲೆಮಹಾದೇಶ್ವರ ದೇವಸ್ಥಾನಕ್ಕೆ ಸಮರ್ಪಿಸಲು ನಿರ್ಧರಿಸಿದ್ದಾರೆ.

ಬೆಂಗಳೂರು (ಜ.14): ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಪಡೆದ ಬೆಳ್ಳಿಯ ಉಡುಗೊರೆಗಳನ್ನು ಮಲೆಮಹಾದೇಶ್ವರ ದೇವಸ್ಥಾನಕ್ಕೆ ಸಮರ್ಪಿಸಲು ನಿರ್ಧರಿಸಿದ್ದಾರೆ.

ಮಲೆಮಹದೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ತಾವು ಮುಖ್ಯಮಂತ್ರಿಯಾಗಿ ಹಲವಾರು ಸಾರ್ವಜನಿಕರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಂದ ಸ್ವೀಕರಿಸಿರುವ ಹಲವಾರು ಬೆಲೆಬಾಳುವ ಬೆಳ್ಳಿಯ ಗದೆ, ಕವಚ, ಕತ್ತಿ ಮತ್ತಿತರ ಆಭರಣಗಳನ್ನು ಮಲೆ ಮಹದೇಶ್ವರನ ಬೆಳ್ಳಿ ರಥ ನಿರ್ಮಾಣಕ್ಕಾಗಿ ನೀಡುವುದಾಗಿ ಪ್ರಕಟಿಸಿದರು.

ಇದಕ್ಕೂ ಮೊದಲು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ವೇಳೆ ಮಲೇ ಮಹದೇಶ್ವರನ ಬೆಳ್ಳಿ ರಥ ನಿರ್ಮಾಣಕ್ಕಾಗಿ 400 ಕೆ.ಜಿ. ಬೆಳ್ಳಿಯ ಅಗತ್ಯವಿದೆ ಎಂದು ಸಿಎಂ ಎದುರು ವಿವರಿಸಿದರು. ಆಗ, ‘ಸರ್ಕಾರದಿಂದ ಮತ್ತಷ್ಟು ಅನುದಾನ ವನ್ನು ಬೆಳ್ಳಿ ಖರೀದಿಗೆ ವಿನಿಯೋಗ ಮಾಡುವ ಬದಲು ನನಗೆ ಬಂದಿರುವ ಬೆಳ್ಳಿಯ ಎಲ್ಲ ವಸ್ತುಗಳನ್ನು ಸಮರ್ಪಿಸುತ್ತೇನೆ. ಅದಕ್ಕಿಂತ ಮಿಕ್ಕಿ ಬೇಕಾಗುವ ಬೆಳ್ಳಿಯನ್ನು ಮಾತ್ರ ಖರೀದಿಸಲು ಯೋಚಿಸೋಣ’ ಎಂದು ಹೇಳಿದರು.

loader