ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ಯಡಿಯೂರಪ್ಪ ತನಗೆ ಟಿಕೆಟ್ ನೀಡಲ್ಲ ಎಂದು ತಿಳಿದು ಈಶ್ವರಪ್ಪನವರು ಸಂಗ್ಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರು (ಜ.26):ಬಿಜೆಪಿ ವಿಪಕ್ಷ ನಾಯಕ ಈಶ್ವರಪ್ಪರ ಸಂಗ್ಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ ಈಶ್ವರಪ್ಪಗೆ ಯಾವಾಗ ಸಂಗ್ಗೊಳ್ಳಿ ರಾಯಣ್ಣ ನೆನಪಾದ್ರೊ ಗೊತ್ತಿಲ್ಲ, ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಪ್ರದೇಶ ಕುರುಬ ಸಂಘದಿಂದ ವೀರ ಯೋಧ ಸಂಗ್ಗೊಳ್ಳಿ ರಾಯಣ್ಣ 186 ನೇ ಹುತಾತ್ಮ ದಿನಾಚರಣೆ ಪ್ರಯಕ್ತ ಫ್ರೀಡಂ ಪಾರ್ಕ್’ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ಯಡಿಯೂರಪ್ಪ ತನಗೆ ಟಿಕೆಟ್ ನೀಡಲ್ಲ ಎಂದು ತಿಳಿದು ಈಶ್ವರಪ್ಪನವರು ಸಂಗ್ಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ಕೆಜೆಪಿಯಿಂದ ಬಂದ ರುದ್ರೆಗೌಡರನ್ನ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಮಾಡಲಾಗಿದೆ. ಆ ಕೋಪಕ್ಕೆ ಈಶ್ವರಪ್ಪ, ರಾಯಣ್ಣ ಹೆಸರಲ್ಲಿ ರಾಜಕಾರಣ ಆರಂಭಿಸಿದ್ದಾರೆ ಎಂದು ಸಿಎಂ ಆರೋಪಿಸಿದರು.
ಇನ್ನು ಕೆಲವೆ ದಿನಗಳಲ್ಲಿ ಈಶ್ವರಪ್ಪನವರಿಗೆ ಬ್ರಿಗೇಡ್ ನಡೆಸದಂತೆ ಅವರ ಪಕ್ಷದ ಹೈಕಮಾಂಡ್ ಸೂಚಿಸತ್ತೆ. ಆಗ ಈಶ್ವರಪ್ಪನವರು ಬಿಜೆಪಿಯಲ್ಲಿ ಸುಮ್ನೆ ಇರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವ ದಿನೇಶ್ ಗುಂಡುರಾವ್, ಹೆಚ್.ಎಂ. ರೇವಣ್ಣ, ವರ್ತೂರು ಪ್ರಕಾಶ್ ಮೊದಲಾದ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
