ಸಿಎಂ ಸಿದ್ರಾಮಯ್ಯ ಬರೋಬ್ಬರಿ 5 ಗಂಟೆಗಳ ಕಾಲ ಖಾಸಗಿ ಚಾನೆಲ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲ ಕೆಲಸವನ್ನೂ ಬದಿಗೊತ್ತಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಡೀ ಜೀವನವನ್ನು ಮೆಲುಕು ಹಾಕಿದ್ದಾರೆ.
ಬೆಂಗಳೂರು(ಜೂ.23): ಸಿಎಂ ಸಿದ್ರಾಮಯ್ಯ ಬರೋಬ್ಬರಿ 5 ಗಂಟೆಗಳ ಕಾಲ ಖಾಸಗಿ ಚಾನೆಲ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲ ಕೆಲಸವನ್ನೂ ಬದಿಗೊತ್ತಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಡೀ ಜೀವನವನ್ನು ಮೆಲುಕು ಹಾಕಿದ್ದಾರೆ.
ಕರ್ನಾಕಟದ ಮುಖ್ಯಮಂತ್ರಿ ಸಿದ್ದರಾಮಯ್ಯನಿನ್ನೆ ಮತ್ತೆ ಬಾಲ್ಯ, ಯೌವ್ವನ ಮತ್ತು ತಮ್ಮ ಹಳ್ಳಿ ಜೀವನಕ್ಕೆ ಮರಳಿದ್ದರು.. ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ನಡೆಸಿಕೊಡೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದರು. ಬೆಳಗ್ಗೆ 11 ಗಂಟೆ ಹೊತ್ತಿಗೆ ಸ್ಟುಡಿಯೋಗೆ ಆಗಮಿಸಿದ್ದು, ನಿಗದಿತ ಸಮಯಕ್ಕೆ ಬಂದು 5 ಗಂಟೆಗಳ ಕಾಲ ತಮ್ಮ ಇಡೀ ಜೀವನವನ್ನು ಮೆಲುಕು ಹಾಕಿದರು.
ಆದರೆ ಸಿದ್ರಾಮಯ್ಯ ಎಲ್ಲೂ ಕಾರ್ಯಕ್ರಮದ ಗುಟ್ಟು ಬಿಟ್ಟುಕೊಡಲಿಲ್ಲ. ಊಟದ ಸಮಯದಲ್ಲೂ ಅಷ್ಟೇ ಶನಿವಾರ ಕಾರ್ಯಕ್ರಮ ಪ್ರಸಾರ ಆಗುತ್ತೆ ಆಗಲೇ ನೋಡಿ ಅಂತ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಕುಟುಂಬದ ಸದಸ್ಯರು ರಾಜಕೀಯ ಸ್ನೇಹಿತರೂ ಆಗಮಿಸಿದ್ದರು. ಸಾಧಕರ ಸ್ಫೂರ್ತಿದಾಯಕ ಬದುಕನ್ನು ತೆರೆದಿಡುವ ಕಾರ್ಯಕ್ರಮದಲ್ಲಿ ರಾಜ್ಯದ ದೊರೆ ಸಿದ್ರಾಮಯ್ಯ ಮನದಾಳದ ಮಾತು ಮತ್ತು ಬದುಕಿನ ಹಾದಿಯನ್ನು ಬಿಚ್ಚಿಟ್ಟಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.
