ಚಾಮರಾಜಪೇಟೆಗೆ ‘ಕೈ’ ಅಭ್ಯರ್ಥಿ ಅಂತಿಮ?

First Published 21, Jan 2018, 8:51 PM IST
CM Siddaramaiah Gives Clue About Chamrajpet Candidate
Highlights

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ವಾಲ್ಮೀಕಿ ಭವನ ಉದ್ಘಾಟನೆ ವೇಳೆ ಜಮೀರ್ ಪರ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಜಮೀರ್​ ಪರವಾಗಿ ಮತ ಕೇಳಲು ಬರುತ್ತೇನೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಸರ್ಕಾರದ ಎಲ್ಲಾ ಸಾಧನೆಗಳ ಈಗ ಹೇಳಲ್ಲ, ಇಲ್ಲಿಗೆ ಜಮೀರ್ ಪರವಾಗಿ ಮತ ಕೇಳಲು ಬರುತ್ತೇನೆ. ಆಗ ಎಲ್ಲಾ ವಿವರ ಹೇಳುತ್ತೇನೆ, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

loader