ಕೊಪ್ಪಳ(ಡಿ.14): ಕೊಪ್ಪಳದ ಗಂಗಾವತಿ ತಾಲೂಕಿನ ಸುನೀಲ್ ರಾಯ್ಕರ್ ಎಂಬಾತ ಸಿಎಂ ಸಿದ್ಧರಾಮಯ್ಯರಿಗೆ ಫೇಸ್'ಬುಕ್'ನಲ್ಲಿ ಕೊಲೆ ಬೆದರಿಕೆಯೊಡ್ಡಿರುವ ವಿಚಾರ ಬೆಳಕಿಗೆ ಬಂದಿದೆ.

ಡಿಸೆಂಬರ್ 12 ರಂದು ಸಂಜೆ 6 ಗಂಟೆಗೆ ಫೇಸ್'ಬುಕ್ ಸ್ಟೇಟಸ್'ನ್ನು ಅಪ್'ಡೇಟ್ ಮಾಡಿದ್ದ ಸುನೀಲ್ ರಾಯ್ಕರ್ 'ಲೇ ಮುಖ್ಯಮಂತ್ರಿ ನಮ್ಮ ಊರಿಗೆ ಬಂದ್ರೇ ನಿನ್ನನ್ನ ಕೊಂದೆ ಬಿಡತ್ತಾರೆಲೇ' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸಿಎಂ ಸಿದ್ಧರಾಮಯ್ಯರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಇತರ ಪೋಸ್ಟ್'ಗಳನ್ನೂ ಅಪ್'ಡೇಟ್ ಮಾಡಿದ್ದಾನೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಗಾವತಿ ನಗರ ಸಭೆ ಮಾಜಿ ಅಧ್ಯಕ್ಷ ನಿನ್ನೆ ಗಂಗಾವತಿ ನಗರ ಠಾಣೆಯಲ್ಲಿ ಸುನೀಲ್ ರಾಯ್ಕರ್ ವಿರುದ್ಧ ದೂರು ದಾಖಲಿಸಿದ್ದು, ಆರೋಪಿ ಸುನೀಲ್ ವಿರುದ್ಧ FIR ದಾಖಲಿಸಲಾಗಿದೆ.