ಇವರ ಹೆಸರು ಕೇಳಿದರೆ ಸಿಎಂ ಸಿಟ್ಟಾಗೋದ್ಯಾಕೆ?

First Published 20, Mar 2018, 6:33 PM IST
CM Siddaramaiah get angry while heard this name
Highlights

ಅಶೋಕ್ ಖೇಣಿ, ಆನಂದ್ ಸಿಂಗ್ ಬಗ್ಗೆ ಪ್ರಶ್ನೆ ಕೇಳಿದರೆ ಸಾಕು  ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಮೇಲೆ ಸಿಟ್ಟಾಗುತ್ತಾರೆ.

ಬೆಂಗಳೂರು (ಮಾ. 20): ಅಶೋಕ್ ಖೇಣಿ, ಆನಂದ್ ಸಿಂಗ್ ಬಗ್ಗೆ ಪ್ರಶ್ನೆ ಕೇಳಿದರೆ ಸಾಕು  ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಮೇಲೆ ಸಿಟ್ಟಾಗುತ್ತಾರೆ.
‘ಏನ್ರೀ ನನ್ನನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡ್ತೀರಾ’ ಎಂದು  ರೇಗುತ್ತಾರೆ. ಉಳಿದ ಯಾವುದೇ ಪ್ರಶ್ನೆಗೆ ಥಟ್ಟನೆ ಉತ್ತರ ಕೊಡುವ  ಸಿದ್ದು, ಕಳಂಕಿತರ ಬಗ್ಗೆ ಏನಾದರೂ ಕೇಳಿದರೆ ಮಾತ್ರ ಉತ್ತರ ಕೊಡುವ ಮೊದಲೇ ಕೋಪ ಗೊಳ್ಳುತ್ತಾರೆ. ಆದರೆ ಪತ್ರಿಕಾಗೋಷ್ಠಿ ಮುಗಿದ ಮೇಲೆ ಅವರನ್ನು ಕರೆಸಿಕೊಂಡು, ‘ಅದೆಲ್ಲ ಇರೋದೇ  ಬಿಡ್ರಿ..’ ಎಂದು ನಗುನಗುತ್ತಾ ಹೇಳುತ್ತಾರೆ.

-ಪ್ರಶಾಂತ್ ನಾತು 

ರಾಜಕಾರಣದ ಬಗ್ಗೆ ಕುತೂಹಲಕಾರಿ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader