ಕೇವಲ ಭಾಷಣ ಮಾಡುವುದನ್ನು ಬಿಟ್ಟು ವರುಣಾ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಅವರು  ಕೇಂದ್ರ ಸಚಿವ ಸದಾನಂದ ಗೌಡ  ಅವರಿಗೆ ಸವಾಲು ಹಾಕಿದ್ದಾರೆ.  

ಬೆಂಗಳೂರು(ಡಿ.10): ಕೇಂದ್ರ ಸಚಿವ ಸದಾನಂದ ಗೌಡರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಸದಾನಂದ ಗೌಡರು ಭಾಷಣ ಬಿಟ್ಟು ವರುಣಾಗೆ ಬಂದು ಸ್ಪರ್ಧಿಸಲಿ ಎಂದು ಹೇಳಿದ್ದಾರೆ. 

ಬಿಜೆಪಿಗೆ ವರುಣಾದಲ್ಲಿ ಚೆನ್ನಾಗಿದ್ದರೆ ಸದಾನಂದ ಗೌಡರೇ ಸ್ಪರ್ಧಿಸಲಿ ಎಂದು ಮುಖ್ಯಮಂತ್ರಿ ಸವಾಲು ಹಾಕಿದ್ದಾರೆ. ಬಿಜೆಪಿ ಮುಖಂಡ ‘ಸದಾನಂದ ಗೌಡ ಅವರು ಬೇರೆಯವರನ್ನು ಬಲಿಹಾಕುವುದು ಬೇಡ.

ಅಲ್ಲದೇ ಅವರು ಸುಮ್ಮನೆ ಭಾಷಣ ಹೊಡೆಯೋದನ್ನು ಬಿಡಲಿ. ಕೇವಲ ಭಾಷಣ ಮಾಡುವುದನ್ನು ಬಿಟ್ಟು ವರುಣಾ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಸವಾಲು ಹಾಕಿದ್ದಾರೆ.