ಚಾಮುಂಡೇಶ್ವರಿ ಗೆಲ್ಲಲು ಸಿಎಂ ಕಸರತ್ತು; ಮತದಾರರ ಸೆಳೆಯಲು ಭಾರೀ ಪ್ರಚಾರ

First Published 31, Mar 2018, 9:25 AM IST
CM Siddaramaiah Campaign in Mysuru
Highlights

ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಎರಡನೇ ದಿನ ಸಿಎಂ ಸಿದ್ದರಾಮಯ್ಯ  ಭರ್ಜರಿ  ಪ್ರಚಾರ ಕೈಗೊಂಡಿದ್ದಾರೆ.  ಇಲವಾಲ ಆನಂದೂರು ಹೋಬಳಿಯ 22 ಗ್ರಾಮಗಳಲ್ಲಿ  ಇಂದು ಸಿಎಂ ಮತ ಪ್ರಚಾರ ಕೈಗೊಳ್ಳಲಿದ್ದಾರೆ.  ಜಿ.ಟಿ.ದೇವೇಗೌಡ ತವರು ಗುಂಗ್ರಾಲ್ ಛತ್ರದಲ್ಲಿ ಮತಯಾಚಿಸಲಿದ್ದಾರೆ. 

ಮೈಸೂರು (ಮಾ. 31): ಚಾಮುಂಡೇಶ್ವರಿ ಕ್ಷೇತ್ರದಲ್ಲಿ  ಎರಡನೇ ದಿನ ಸಿಎಂ ಸಿದ್ದರಾಮಯ್ಯ  ಭರ್ಜರಿ  ಪ್ರಚಾರ ಕೈಗೊಂಡಿದ್ದಾರೆ.  ಇಲವಾಲ ಆನಂದೂರು ಹೋಬಳಿಯ 22 ಗ್ರಾಮಗಳಲ್ಲಿ  ಇಂದು ಸಿಎಂ ಮತ ಪ್ರಚಾರ ಕೈಗೊಳ್ಳಲಿದ್ದಾರೆ.  ಜಿ.ಟಿ.ದೇವೇಗೌಡ ತವರು ಗುಂಗ್ರಾಲ್ ಛತ್ರದಲ್ಲಿ ಮತಯಾಚಿಸಲಿದ್ದಾರೆ. 

ಕಡೆಯ ಚುನಾವಣೆಯಲ್ಲಿ  ಚಾಮುಂಡೇಶ್ವರಿಯಲ್ಲಿ ಗೆಲ್ಲಲು ಸಿಎಂ ಕಸರತ್ತು ನಡೆಸುತ್ತಿದ್ದಾರೆ.  ಚಾಮುಂಡೇಶ್ಚರಿ ಕ್ಷೇತ್ರಕ್ಕೆ 5 ದಿನ ಮೀಸಲಿಟ್ಟಿದ್ದಾರೆ. ಇದು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯೂ ಹೌದಾಗಿದೆ. 
ಬೆಳಿಗ್ಗೆ 9 ಗಂಟೆಯಿಂದ ಚಾಮುಂಡೇಶ್ಚರಿ ಕ್ಷೇತ್ರವ್ಯಾಪ್ತಿಯ ಮೈದನಹಳ್ಳಿ, ಮೇಗಳಾಪುರ,ಮಲ್ಲೇಗೌಡನ ಕೊಪ್ಪಲು, ಉಂಡವಾಡಿ,ಚಿಕ್ಕನಹಳ್ಳಿ, ಆನಂದೂರು, ಕಲ್ಲೂರು ನಾಗನಹಳ್ಳಿ, ಕಲ್ಲೂರು,ಯಡಹಳ್ಳಿ, ರಾಮನಹಳ್ಳಿ, ಸಾಗರಕಟ್ಟೆ,ಯಲ್ಲಿ ಪ್ರಚಾರ.
ಮಧ್ಯಾಹ್ನ 2:30 ಕ್ಕೆ ಹೊಸ ಕೋಟೆಯಲ್ಲಿ ಊಟ ಸೇವಿಸಿದ ಬಳಿಕ,ಯಾಚೆಗೌಡನಹಳ್ಳಿ, ದಡದ ಕಲ್ಲಹಳ್ಳಿ,ರಟ್ಟನಹಳ್ಳಿ, ಪ್ರಚಾರ ಮುಗಿಸಿ ಜಿ.ಟಿ.ದೇವೇಗೌಡ ತವರು ಗುಂಗ್ರಾಲ್ ಛತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.  ಬಳಿಕ ನಾಗವಾಲ, ಇಲವಾಲದಲ್ಲಿ ರಾತ್ರಿ 9 ಗಂಟೆವರೆಗೂ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. 

ಸಿಎಂ ಸಿದ್ದರಾಮಯ್ಯಗೆ ಪುತ್ರ ಡಾ.ಯತೀಂದ್ರ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ. 
 

loader