ಚಾಮುಂಡೇಶ್ಚರಿ ಭೇದಿಸಲು ಸಿಎಂ ರಣತಂತ್ರ ನಡೆಸುತ್ತಿದ್ದಾರೆ.  ತವರಿನಲ್ಲಿ ಸಿಎಂ ಸಿದ್ದರಾಮಯ್ಯ ಎರಡನೇ ಬಾರಿಗೆ ರೌಂಡ್ಸ್ ಹಾಕಲಿದ್ದಾರೆ. 

ಮೈಸೂರು (ಏ. 06): ಚಾಮುಂಡೇಶ್ಚರಿ ಭೇದಿಸಲು ಸಿಎಂ ರಣತಂತ್ರ ನಡೆಸುತ್ತಿದ್ದಾರೆ. ತವರಿನಲ್ಲಿ ಸಿಎಂ ಸಿದ್ದರಾಮಯ್ಯ ಎರಡನೇ ಬಾರಿಗೆ ರೌಂಡ್ಸ್ ಹಾಕಲಿದ್ದಾರೆ. 

ಚಾಮುಂಡೇಶ್ಚರಿಯಲ್ಲಿ ಒಕ್ಕಲಿಗ ಮತ ಭೇಟೆಗೆ ಸಿಎಂ ಪ್ಲಾನ್ ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಬೆಂಬಲ ಕೋರಿ ಇಂದು ಮೈಸೂರಿನ ನಿವೇದಿತನಗರದಲ್ಲಿರೋ ಶ್ರೀರಂಗ ಭವನದಲ್ಲಿ ಸಿಎಂ ಬೃಹತ್ ಸಭೆ ನಡೆಸಲಿದ್ದಾರೆ. ಸಿಎಂ ಮೇಲಿಂದ ಮೇಲೆ ರೌಡ್ಸ್ ಮಾಡುತ್ತಿದ್ದಂತೆ ಜಿ.ಟಿ.ದೇವೇಗೌಡಗೆ ನಡುಕ ಶುರುವಾಗಿದೆ. ಚಾಮಂಡೇಶ್ವರಿಯನ್ನು ಶತಾಯ ಗತಾಯ ಗೆಲ್ಲುವುದಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕಸರತ್ತು ನಡೆಸಿದ್ದಾರೆ. 

ತಡರಾತ್ರಿಯೇ ಮೈಸೂರಿಗೆ ಆಗಮಿಸಿರೋ ಸಿಎಂ ಸಿದ್ದರಾಮಯ್ಯ. ಸುತ್ತೂರು ಮಠಕ್ಕೂ ಸಹ ಭೇಟಿ ನೀಡಲಿದ್ದಾರೆ. ಅಮಿತ್ ಶಾ, ಬಿಎಸ್ ವೈ ಪುತ್ರ ವಿಜಯೇಂದ್ರ ಭೇಟಿ ನೀಡಿದ ಬೆನ್ನಲ್ಲೇ ಸಿಎಂ ಭೇಟಿ ನೀಡಲಿದ್ದಾರೆ. 
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠ