ರಿಲಾಕ್ಸ್ ಮೂಡ್'ನೊಂದಿಗೆ ಸಿಎಂ ಸೀಕ್ರೆಟ್ ಮೀಟಿಂಗ್..! ಎಲ್ಲಿ ಗೊತ್ತೆ ?

First Published 28, Mar 2018, 9:18 PM IST
CM Secret Meeting
Highlights

4 ದಿನಗಳ ಬಳಿಕ ಸೋಮವಾರ ವಾಪಸಾಗಲಿದ್ದು ಚುನಾವಣಾ ಖರ್ಚು ವೆಚ್ಚದ ಬಗ್ಗೆಯೂ ಇಲ್ಲಿಯೇ ಮಾತುಕತೆ ನಡೆಯಲಿದೆ.

ಬೆಂಗಳೂರು(ಮಾ.28): ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಲ್ಯಾಕ್ಸ್​ ಮೂಡ್​ಗೆ ತೆರಳಲಿದ್ದಾರೆ.

ಬಂಡೀಪುರದ ರೆಸಾರ್ಟ್​​​ನಲ್ಲಿ ನಾಳೆಯಿಂದ 4 ದಿನಗಳ ಕಾಲ ವಾಸ್ತವ್ಯ ಹೊರಡಲಿರೋ ಸಿಎಂ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ. 5 ವರ್ಷಗಳ ಆಡಳಿತದ ಬಳಿಕ ದೇಹಕ್ಕೆ ಒಂದಿಷ್ಟು ವಿಶ್ರಾಂತಿ ಬೇಕಾಗಿದ್ದು ಟೆನ್ಷನ್ ಫ್ರೀ ಜೊತೆಗೆ ಗೆಲುವಿಗೆ ಮಾಸ್ಟ'ರ್ ಪ್ಲ್ಯಾನ್ ಹೂಡಲಿದ್ದಾರೆ ಎನ್ನಲಾಗಿದೆ.

4 ದಿನಗಳ ಬಳಿಕ ಸೋಮವಾರ ವಾಪಸಾಗಲಿದ್ದು ಚುನಾವಣಾ ಖರ್ಚು ವೆಚ್ಚದ ಬಗ್ಗೆಯೂ ಇಲ್ಲಿಯೇ ಮಾತುಕತೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯರ ರೆಸಾರ್ಟ್ ವಾಸ್ತವ್ಯದ ಸುತ್ತ ಕುತೂಹಲ ಹೆಚ್ಚಾಗಿದೆ.

loader