ಎದ್ದು ಹೊರಟ ಜನರ ತಡೆಯಲು ಪೊಲೀಸರ ಹರಸಾಹಸ: ಸಿಎಂ ಮಾತು ಆರಂಭಿಸುವಷ್ಟರಲ್ಲಿ ಕ್ರೀಡಾಂಗಣ ಫುಲ್ ಖಾಲಿ

First Published 8, Apr 2018, 11:20 AM IST
CM Programme Full Empty at Chikkaballapur
Highlights

ಅರ್ಜುನ್ ಜನ್ಯ ಸಂಗೀತ ಕಾರ್ಯಕ್ರಮ ಮುಗಿದ ನಂತರ, ರಾಹುಲ್ ಭಾಷಣ ಆರಂಭಿಸುವ ವೇಳೆಗೆ ರಾತ್ರಿ 7 ಗಂಟೆಯಾಗಿತ್ತು. ಈ ವೇಳೆ ರಾಹುಲ್ ಭಾಷಣ ಶುರು ಮಾಡುತ್ತಿದ್ದಂತೆ ಜನತೆ ಕ್ರೀಡಾಂಗಣದಿಂದ ಹೊರ ನಡೆಯಲು ಮುಂದಾದರು.

ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿ ಭಾಷಣ ಆರಂಭಿಸುತ್ತಿದ್ದಂತೆ ಸಾರ್ವಜನಿಕರು ಮನೆಯತ್ತ ಮುಖ ಮಾಡಿದ ಘಟನೆ ನಡೆಯಿತು.

ಅರ್ಜುನ್ ಜನ್ಯ ಸಂಗೀತ ಕಾರ್ಯಕ್ರಮ ಮುಗಿದ ನಂತರ, ರಾಹುಲ್ ಭಾಷಣ ಆರಂಭಿಸುವ ವೇಳೆಗೆ ರಾತ್ರಿ 7 ಗಂಟೆಯಾಗಿತ್ತು. ಈ ವೇಳೆ ರಾಹುಲ್ ಭಾಷಣ ಶುರು ಮಾಡುತ್ತಿದ್ದಂತೆ ಜನತೆ ಕ್ರೀಡಾಂಗಣದಿಂದ ಹೊರ ನಡೆಯಲು ಮುಂದಾದರು. ಇದನ್ನು ಕಂಡ ಪೊಲೀಸರು, ಕ್ರೀಡಾಂಗಣದ ಎಲ್ಲ ದ್ವಾರಗಳನ್ನು ಬಂದ್ ಮಾಡಿ, ಸಾರ್ವಜನಿಕರನ್ನು

ಹಿಡಿದಿಡುವ ಪ್ರಯತ್ನ ಮಾಡಿದರು. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಗೇಟ್ ಮತ್ತು ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಹೊರನಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಆರಂಭಿಸುವಷ್ಟರಲ್ಲಿ ಕ್ರೀಡಾಂಗಣ ಬಹುತೇಕ ಖಾಲಿಗೊಂಡಿತ್ತು.

loader