ಖಾಸಗಿ ವೈದ್ಯರ ವಿಧೇಯಕ ಮಂಡನೆ (ಕೆಪಿಎಂಇ) ಬಗ್ಗೆ ಸಿಎಂ ನೇತೃತ್ವದಲ್ಲಿ ನಡೆಸಿದ ಸಭೆ ಮುಕ್ತಾಯಗೊಂಡಿದೆ. ಆರೋಗ್ಯ ಸಚಿವರು, ಕಾನೂನು ಸಚಿವರ ಜತೆ ಸಿಎಂ ಸಭೆ ನಡೆಸಿದ್ದಾರೆ. ಸಭೆ ನಿರ್ಧಾರಗಳ ಬಗ್ಗೆ  ಮಾಧ್ಯಮಗಳಿಗೆ ಹೇಳಲ್ಲ. ವೈದ್ಯರಿಗೆ ಹೇಳುತ್ತೇವೆಂದು ಸಿಎಂ ಹೇಳಿದ್ದಾರೆ.  

ಬೆಳಗಾವಿ (ನ.16): ಖಾಸಗಿ ವೈದ್ಯರ ವಿಧೇಯಕ ಮಂಡನೆ (ಕೆಪಿಎಂಇ) ಬಗ್ಗೆ ಸಿಎಂ ನೇತೃತ್ವದಲ್ಲಿ ನಡೆಸಿದ ಸಭೆ ಮುಕ್ತಾಯಗೊಂಡಿದೆ. ಆರೋಗ್ಯ ಸಚಿವರು, ಕಾನೂನು ಸಚಿವರ ಜತೆ ಸಿಎಂ ಸಭೆ ನಡೆಸಿದ್ದಾರೆ. ಸಭೆ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಹೇಳಲ್ಲ. ವೈದ್ಯರಿಗೆ ಹೇಳುತ್ತೇವೆಂದು ಸಿಎಂ ಹೇಳಿದ್ದಾರೆ.

ಸಿಎಂ ಸಲಹೆಯನ್ನು ಸಚಿವ ರಮೇಶ್ ಕುಮಾರ್ ಒಪ್ಪಿದ್ದಾರೆ. ಸಿಎಂ ಸಲಹೆಯಂತೆ ಕೆಲವು ವಿವಾದ ಅಂಶಗಳ ಪರಿಷ್ಕರಣೆಗೆ ಸಚಿವರು ಸಮ್ಮತಿ ನೀಡಿದ್ದಾರೆ. ಮೂರ್ನಾಲ್ಕು ವಿವಾದಿತ ಅಂಶಗಳ ಪರಿಷ್ಕರಣೆಗೆ ಸಚಿವರು ಒಪ್ಪಿಕೊಂಡಿದ್ದಾರೆಂದು ಸುವರ್ಣ ನ್ಯೂಸ್'ಗೆ ಉನ್ನತ ಮೂಲಗಳಿಂದ ಸಭೆ ಬೆಳವಣೆಗೆ ಬಗ್ಗೆ ಮಾಹಿತಿ ಸಿಕ್ಕಿದೆ.

ಚುನಾವಣೆ ಹತ್ತಿರವಿರುವಾಗ ಯಾರನ್ನೂ ಎದುರು ಹಾಕಿಕೊಳ್ಳುವುದು ಬೇಡ. ನಿಮ್ಮ ಮಾತಂತೆ ಹೋದರೆ ವೈದ್ಯರನ್ನು ಕಡೆಗಣಿಸಿದಂತಾಗುತ್ತೆ ಎಂದು ಸಿಎಂ ರಮೇಶ್ ಕುಮಾರ್'ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಮಾತಿಗೆ ಟಿ.ಬಿ.ಜಯಚಂದ್ರ, ಡಾ.H.C.ಮಹದೇವಪ್ಪ ದನಿಗೂಡಿಸಿದ್ದಾರೆ. ನಾಳೆ ಮಧ್ಯಾಹ್ಯ ಅಂತಿಮ ನಿರ್ಧಾರ ಹೊರಬೀಳಲಿದೆ.