Asianet Suvarna News Asianet Suvarna News

ಸಿಎಂ ಗೆ ಡಿನೋಟಿಫಿಕೇಶನ್ ಉರುಳು: ಸಮನ್ಸ್ ಜಾರಿ!

ಕುಮಾರಸ್ವಾಮಿಗೆ ಕಂಟಕ...? 

ಬಜೆಟ್​​​ ಮಂಡನೆ ದಿನವೇ ಕುಮಾರಸ್ವಾಮಿಗೆ ಕಾದಿದೆ ಕಂಟಕ..!

ಕುಮಾರಸ್ವಾಮಿಗೆ ಉರುಳಾಗಲಿದೆಯಾ ಭ್ರಷ್ಟಾಚಾರ ಪ್ರಕರಣ..?

ಬಜೆಟ್​ ಮಂಡನೆ ದಿನವೇ ಕೋರ್ಟ್​​ ಹಾಜರಾಗಬೇಕಿದೆ ಹೆಚ್ಡಿಕೆ..!

ಕುಮಾರಸ್ವಾಮಿಗೂ ಕಾಡಲಿದ್ಯಾ ಭೂ ಕಂಟಕ.? 

2006ರ ಕೇಸ್​​ಗೆ ಈಗ ಸಿಕ್ಕಿದೆ ಮರುಜೀವ..? 
 

CM Kumarswamy get summons in Denotification case

ಬೆಂಗಳೂರು(ಜೂ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹೊಸದೊಂದು ಕಂಟಕ ಶುರುವಾಗಿದೆ. ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದಾಗ ಮಾಡಿದ್ದ ಡಿನೋಟಿಫಿಕೇಶನ್ ಪ್ರಕರಣವೊಂದು ಇದೀಗ ಅವರಿಗೆ ಉರುಳಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿ ಡಿನೋಟಿಫಿಕೇಶನ್ ಪ್ರಕರಣ ಇದೀಗ ಹೆಡೆ ಎತ್ತಿದೆ. ಹಿಂದೆ ಸಿಎಂ ಆಗಿದ್ದಾಗ  ಕುಮಾರಸ್ವಾಮಿ ಶ್ರೀರಾಮ್​ ಹಾಗೂ ರವಿಪ್ರಕಾಶ್​ ಎಂಬುವವರಿಗೆ ಡಿನೋಟಿಫಿಕೇಶನ್​ ಮಾಡಿಕೊಟ್ಟಿದ್ದರು. ಬಿಡಿಎ ಭೂಮಿ ಸ್ವಾಧೀನಕ್ಕೆ ಪಡೆದು ಪರಿಹಾರ ನೀಡಿದ್ದಲ್ಲದೇ ನಿವೇಶನವನ್ನೂ ಹಂಚಿತ್ತು. ಆದರೂ ಆಗಿನ ಅರಣ್ಯ ಸಚಿವ ಚೆನ್ನಿಗಪ್ಪ ಮನವಿ ಮೇರೆಗೆ ಕುಮಾರಸ್ವಾಮಿ ಡಿನೋಟಿಫಿಕೇಶನ್​ ಮಾಡಿದ್ದರು

ಆದರೆ ಡಿನೋಟಿಫೈ ಮಾಡಿದ್ದ ಜಮೀನು ಮಾರಾಟದಿಂದ ಪಾಲು ಪಡೆದ ಆರೋಪ ಸಿಎಂ ಮತ್ತು ಚನ್ನಿಗಪ್ಪ ಮೇಲೆ ಇದೀಗ ಕೇಳಿ ಬಂದಿದೆ. ಈ ಕುರಿತು 2012ರಲ್ಲಿ ಚಾಮರಾಜನಗರದ ಮಹದೇವಸ್ವಾಮಿ ಎಂಬುವವರು ಲೋಕಾಯುಕ್ತ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಎಚ್​.ಡಿ. ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಪಡೆದು ಪ್ರಕರಣ ರದ್ದತಿಗೆ ಹೈಕೋರ್ಟ್​​ಗೆ ಹೋಗಿದ್ದರು. 

ಆದರೆ ಹೈಕೋರ್ಟ್​ ಪ್ರಕರಣ ರದ್ದು ಮಾಡಲು ನಿರಾಕರಿಸಿ, ತನಿಖೆಗೆ ಆದೇಶಿಸಿತ್ತು. ಪ್ರಕರಣವನ್ನು ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿದ್ದರು. ಆರೋಪ ಪಟ್ಟಿ ಸಲ್ಲಿಕೆ ನಂತರ ಕೋರ್ಟ್ ಹಲವು ಬಾರಿ ಸಿಎಂಗೆ ನೋಟಿಸ್​ ಕೂಡ ಜಾರಿ ಮಾಡಿತ್ತು. ಆದರೆ ನೋಟಿಸ್​​ ಅನ್ವಯ ಎಚ್.ಡಿ. ಕುಮಾರಸ್ವಾಮಿ ಅವರು ನ್ಯಾಯಾಲಯಕ್ಕೆ ಇದುವರೆಗೂ ಹಾಜರಾಗಿಲ್ಲ.

ಈ ಕಾರಣದಿಂದ ಚಾರ್ಜ್​ ಶೀಟ್​ ಸಂಬಂಧ ಆರೋಪ ಹೊರಿಸುವ ಮುನ್ನ ಕೋರ್ಟ್​ ಹಾಜರಾಗುವಂತೆ ಕುಮಾರಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.​ ಜುಲೈ 5ರಂದು ಕೋರ್ಟ್​​ಗೆ ಹಾಜರಾಗುವಂತೆ ಜೂನ್ 23ರಂದು ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

Follow Us:
Download App:
  • android
  • ios