ಬಿಪಿಎಲ್​ ಗರ್ಭಿಣಿಯರಿಗೆ 1 ಸಾವಿರ ರೂ. ಮಾಸಿಕ ಭತ್ಯೆ ಆಧಾರ ಸ್ವಯಂ ಯೋಜನೆ ಘಟಕ ವೆಚ್ಚ ಹೆಚ್ಚಳ ಶೇಕಡಾ 50ರಷ್ಟು ಬ್ಯಾಂಕ್​ ಸಾಲ ಮತ್ತು ಶೇಕಡಾ 50 ಸಹಾಯಧನ ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಗೆ 5 ಕೋಟಿ ಅನುದಾನ ಜಿಲ್ಲೆಯ ಪ್ರತಿ ಉಪವಿಭಾಗಗಳಿಗೂ ವೃದ್ಧಾಶ್ರಮ ಸ್ಥಾಪನೆ ಗುರಿ

ಬೆಂಗಳೂರು(ಜು.5): ಸಿಎಂ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದಾರೆ. ಇಲಾಖಾವಾರು ಅನುಮೋದನೆಯ ಕುರಿತು ಸಿಎಂ ಸದನಕ್ಕೆ ವಿವರವಾದ ಮಾಹಿತಿ ನೀಡುತ್ತಿದ್ದಾರೆ.

ಈಗಾಗಲೇ ಸಮಾಜ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಗಳ ಆರ್ಥಿಕ ರಹದಾರಿಗೆ ನೀಲನಕ್ಷೆ ಸಿದ್ದಪಡಿಸಲಾಗಿದೆ. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಎಂ ನೀಡಿದ ಅನುದಾನದತ್ತ ಗಮನಹರಿಸುವುದಾದರೆ..

ಬಿಪಿಎಲ್​ ಗರ್ಭಿಣಿಯರಿಗೆ ಮಾತೃಪೂರ್ಣ ಯೋಜನೆಯಡಿಯಲ್ಲಿ 1 ಸಾವಿರ ರೂ ಮಾಸಿಕ ಭತ್ಯೆಯನ್ನು ಸಿಎಂ ಘೋಷಿಸಿದ್ದಾರೆ. ಅಲ್ಲದೇ ಆಧಾರ ಸ್ವಯಂ ಯೋಜನೆ ಘಟಕ ವೆಚ್ಚ ಹೆಚ್ಚಳಕ್ಕೆ ಸಿಎಂ ಅಸ್ತು ಎಂದಿದ್ದಾರೆ. ಈ ಹಿಂದೆ ಇದ್ದ 35 ಸಾವಿರ ರೂ. ವೆಚ್ಚವನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. 

ಇಷ್ಟೇ ಅಲ್ಲದೇ ಶೇಕಡಾ 50ರಷ್ಟು ಬ್ಯಾಂಕ್​ ಸಾಲ ಮತ್ತು ಶೇಕಡಾ 50 ಸಹಾಯಧನ, ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಗೆ 5 ಕೋಟಿ ಅನುದಾನ, ಜಿಲ್ಲೆಯ ಪ್ರತಿ ಉಪವಿಭಾಗಗಳಿಗೂ ವೃದ್ಧಾಶ್ರಮ ಸ್ಥಾಪನೆ ಗುರಿ ಮುಂತಾದ ಯೋಜನೆಗಳನ್ನು ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.