ಆದಿಚುಂಚನಗಿರಿಯಲ್ಲಿ ಎಚ್‌ಡಿಕೆ ಅಮಾವಾಸ್ಯೆ ಪೂಜೆ ಮಾಡ್ತಿರೋದು ಯಾಕೆ?

First Published 13, Jun 2018, 11:17 AM IST
CM Kumaraswamy To Visit Adichunchanagiri Mutt
Highlights

ಸಿಎಂ ಕುಮಾರಸ್ವಾಮಿ ಆದುಚುಂಚನಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಅಮಾವಾಸ್ಯೆ ಪೂಜೆ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿಯಾದ ಮೇಲೆ ಇದೇ ಮೊದಲ ಸಾರಿ ಕುಮಾರಸ್ವಾಮಿ ಆದಿಚುಂಚನಗಿರಿಗೆ ಭೇಟಿ ನೀಡುತ್ತಿದ್ದಾರೆ. 

ಮಂಡ್ಯ ಜೂನ್ 13:   ಸಿಎಂ ಆದ ಬಳಿಕ ಇದೇ ಮೊದಲಬಾರಿಗೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅಮಾವಾಸ್ಯೆ ಪೂಜೆ ನೇರವೇರಿಸಲಿದ್ದಾರೆ.

ಮಂಡ್ಯ ಜಿಲ್ಲೆ,ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಶ್ರಿ ಕ್ಷೇತ್ರ ದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪೂಜೆ ಸಲ್ಲಿಸಲಿದ್ದಾರೆ.

ಇಷ್ಟಾರ್ಥ ಸಿದ್ಧಿಗೆ ದೇವೇಗೌಡರ ಕುಟುಂಬ ವಿಶೇಷ ಪೂಜೆ ಸಲ್ಲಿಸುತ್ತಲೇ ಬಂದಿದೆ.  ಈ ಹಿಂದೆ ಒಟ್ಟು ದೇವೇಗೌಡರ ಕುಟುಂಬ 9 ಸಾರಿ ಅಮವಾಸ್ಯೆ ಪೂಜೆ ಸಲ್ಲಿಸಿದೆ. ದೇವೇಗೌಡ ದಂಪತಿ, ಎಚ್ ಡಿಕೆ ದಂಪತಿ ರೇವಣ್ಣ ದಂಪತಿ ತಲಾ ಮೂರು ಸಾರಿ ಅಮಾವಾಸ್ಯೆ ಪೂಜೆ ಸಲ್ಲಿಸಿದ್ದಾರೆ.

loader