ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ವಿಚಾರದ ವಿರುದ್ಧ ಹೋರಾಟ ಜೋರಾಗುತ್ತಿದೆ. ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಕೆಲವು ಹಳ್ಳಿಗಳಲ್ಲಿ ಹೋರಾಟದ ಕೂಗು ಕೇಳಿ ಬರುತ್ತಿದೆ. ಸರ್ಕಾರಕ್ಕೆ ಅರ್ಪಿಸುತ್ತಿರುವ ಮನವಿ ಪತ್ರಗಳ ಸಂಖ್ಯೆ ನೂರಕ್ಕೂ ಅಧಿಕವಾಗಿವೆ. ವಿವಿಧ ಸಂಘಟನೆಗಳ ಜೊತೆಗೆ ರಾಜಕೀಯ ಪಕ್ಷಗಳು ಕೂಡ ಹೋರಾಟಕ್ಕೆ ಬೆಂಬಲ ಘೋಷಿಸಿವೆ.

ಶರಾವತಿ ಬೆಂಗಳೂರಿಗೆ, ಮಲೆನಾಡಿಗೆ ಏನ್ ಗತಿ?

ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ: ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣವನ್ನು ಈ ಹೋರಾಟವನ್ನು ಸಂಘಟಿಸಲು ಮತ್ತು ಜನ ಜಾಗೃತಿ ಮೂಡಿಸಲು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಪ್ರತ್ಯೇಕ ಪೇಜ್ ರೂಪಿಸಲಾಗಿದ್ದು, ಹ್ಯಾಷ್‌ಟ್ಯಾಗ್ ಜೊತೆಗೆ ವಿಚಾರಗಳನ್ನು ಕಳುಹಿಸಲಾಗುತ್ತಿದೆ. ಇದೇ ರೀತಿ ವಾಟ್ಸಾಪ್‌ಗಳಲ್ಲಿ ಕೂಡ ಗುಂಪುಗಳನ್ನು ಮಾಡಿಕೊಂಡು ‘ಸೇವ್ ಶರಾವತಿ’ ಹೆಸರಿನಲ್ಲಿ ಸಂಘಟಿಸಲಾಗುತ್ತಿದೆ.

ಶರಾವತಿ ನೀರನ್ನು ಮುಟ್ಟುವ ಮೊದಲು ನೆನಪಿಡಬೇಕಾದ್ದು!

ಮನೆ ಮನೆಗೆ ಸ್ಟಿಕರ್: ಶರಾವತಿ ಉಳಿಸಿ ಹೋರಾಟದ ಕುರಿತು ಜಾಗೃತಿ ಮೂಡಿಸುವ ಸಂಬಂಧ ಮನೆಗಳ ಗೋಡೆಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಅಭಿಯಾನ ಆರಂಭಗೊಂಡಿದೆ. ಜನರು ಇದನ್ನು ಸ್ವೀಕರಿಸುತ್ತಿದ್ದು, ತಮ್ಮ ಮನೆಯ ಗೋಡೆಯ ಮೇಲೆ ‘ಶರಾವತಿ ಉಳಿಸಿ’ ಸ್ಟಿಕ್ಕರ್ ಅಂಟಿಸಿಕೊಳ್ಳುತ್ತಿದ್ದಾರೆ.

ಸುವರ್ಣ ನ್ಯೂಸ್‌ಗೆ ಸಿಎಂ ಮೊದಲ ಪ್ರತಿಕ್ರಿಯೆ 

ಶರಾವತಿ ತಿರುವು ಬಗ್ಗೆ ಸುವರ್ಣ ನ್ಯೂಸ್ ಸಿಎಂಗೆ ಪ್ರಶ್ನಿಸಿದಾಗ, ಈ ವಿಚಾರದ ಬಗ್ಗೆ ಕುಳಿತು ಚರ್ಚೆ ನಡೆಸುತ್ತೇವೆ. ಇನ್ನೂ ನಾನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

"