ಸಾಲಮನ್ನಾ ಮಾಡುವ ವಿಚಾರವಾಗಿ ಇಂದು ಎಲ್ಲಾ ಜಿಲ್ಲಾ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬ್ಯಾಂಕ್ ಮುಖ್ಯಸ್ಥರ ಜೊತೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ.
ರೈತರ ಸಾಲಮನ್ನಾ : ಇಂದು ಸಿಎಂ ಮಹತ್ವದ ತೀರ್ಮಾನ
ಬೆಂಗಳೂರು : ಸಾಲಮನ್ನಾ ಮಾಡುವ ವಿಚಾರವಾಗಿ ಇಂದು ಎಲ್ಲಾ ಜಿಲ್ಲಾ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬ್ಯಾಂಕ್ ಮುಖ್ಯಸ್ಥರ ಜೊತೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ.
ಸಾಲ ಮನ್ನಾ ವಿಚಾರವಾಗಿ ಸಹಕಾರ ಬ್ಯಾಂಕ್ ಗಳ ಮುಂದೆ ಕೆಲವೊಂದು ಪ್ರಸ್ತಾಪಗಳನ್ನು ಮುಂದಿಡುವ ಸಾಧ್ಯತೆ ಇದ್ದು, ಒಂದೇ ಹಂತದಲ್ಲಿ ಬಡ್ಡಿ ಪಾವತಿ ನಂತರ ವರ್ಷದೊಳಗೆ ಪಾವತಿಸಲು ಕಾಲಾವಕಾಶದ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ.
ಇದರ ಜೊತೆಯಲ್ಲೇ ಅಸಲು ಕಡಿತಗೊಳಿಸಲು ಬೇಡಿಕೆ ಮುಂದಿಡುವ ವಿಚಾರ ಕೂಡಾ ಪ್ರಸ್ತಾಪ ಮಾಡಲಿದ್ದು, ಅಲ್ಲದೇ ಎಷ್ಟು ಸಾಲ ವಿತರಣೆಯಾಗಿದೆ, ಎಷ್ಟು ಸಾಲ ತೀರುವಳಿಯಾಗಿದೆ, ಯಾವ್ಯಾವ ಬೆಳೆಗೆ ಯಾವ್ಯಾವ ಭಾಗದಲ್ಲಿ ಸಾಲ ವಿತರಣೆಯಾಗಿದೆ, ಎಷ್ಟು ಜನ ರೈತರು ಮರುಪಾವತಿಗೆ ಮುಂದೆ ಬಂದಿದ್ದಾರೆ ಎಂಬ ವಿಚಾರವಾಗಿ ಬ್ಯಾಂಕ್ ಗಳಿಂದ ವಿವರ ಪಡೆದುಕೊಳ್ಳಲಿದ್ದಾರೆ.
ಇನ್ನು ಸಾಲ ಮನ್ನಾ ಬಳಿಕ ಹಣವನ್ನು ಎರಡು ಅಥವಾ ಮೂರು ಹಂತದಲ್ಲಿ ಬ್ಯಾಂಕ್ ಗಳಿಗೆ ಸರ್ಕಾರದಿಂದ ಪಾವತಿ ಮಾಡುವ ಪ್ರಸ್ತಾಪವನ್ನು ಕೂಡಾ ಮುಂದಿರಿಸುವ ಸಾಧ್ಯತೆ ಇದೆ. ಅಲ್ಲದೇ ನೇರವಾಗಿ ರೈತರ ಖಾತೆಗೆ ಹಣ ಪಾವತಿಯಾಗುವ ನಿಟ್ಟಿನಲ್ಲಿ ಮೋಸಕ್ಕೆ ಆಸ್ಪದವಾಗದಂತೆ ಕ್ರಮ ವಹಿಸುವ ಬಗ್ಗೆಯೂ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ.
