ಮತ್ತೆ ಜನತಾ ದರ್ಶನ ಆರಂಭ

First Published 29, May 2018, 10:30 PM IST
CM KD Kumaraswamy Start Janata Darshan From Today
Highlights

ಸಮಾಧಾನ ಚಿತ್ತರಾಗಿ ಎಲ್ಲರ ಅಹವಾಲುಗಳನ್ನ ಸ್ವೀಕರಿಸಿದ ಸಿಎಂ, ಸುಮಾರು ಒಂದು ಗಂಟೆ ಕಾಲ ಬಂದಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. 

ಬೆಂಗಳೂರು(ಮೇ.29): 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭಿಸಿದ್ದ ಜನತಾ ದರ್ಶನ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಇದೀಗ ಮತ್ತೆ ಜನತಾ ದರ್ಶನವನ್ನು ಪುನಾರಾಂಭಿಸಿದ್ದಾರೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮೊದಲ ಜನತಾ ದರ್ಶನದಲ್ಲಿ, ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಸಾರ್ವಜನಿಕರು ಆಗಮಿಸಿದ್ದರು. ಸಮಾಧಾನ ಚಿತ್ತರಾಗಿ ಎಲ್ಲರ ಅಹವಾಲುಗಳನ್ನ ಸ್ವೀಕರಿಸಿದ ಸಿಎಂ, ಸುಮಾರು ಒಂದು ಗಂಟೆ ಕಾಲ ಬಂದಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಕೆಲ ಸಮಸ್ಯೆಗಳನ್ನ ಸ್ಥಳದಲ್ಲೇ ಪರಿಹರಿಸುವ ಯತ್ನ ಮಾಡಿದರೆ, ಮತ್ತೆ ಕೆಲವರಿಗೆ ಅಧಿಕಾರಿಗಳ ಜತೆ ಸಮಾಲೋಚಿಸಿ ಪರಿಹರಿಸುವುದಾಗಿ ಭರವಸೆ ಕೊಟ್ಟರು. 

 

loader