ಹುಬ್ಬಳ್ಳಿ:  ಅಯೋಧ್ಯೆ ವಿವಾದವನ್ನು ಬಗೆಹರಿಸಬೇಕು ಎನ್ನುವ ಇಚ್ಛಾಶಕ್ತಿ ಬಿಜೆಪಿಗೆ ಇಲ್ಲ. ಅಯೋಧ್ಯೆ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು  ವಿಧಾನ ಪರಿಷತ್ ಸದಸ್ಯ ಸಿ.ಎಮ್. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. 

ಹುಬ್ಬಳ್ಳಿಯ ಈದ್ಗಾ ಮೈದಾನವನ್ನ ಇಟ್ಟುಕೊಂಡು ಬಿಜೆಪಿಯವರು ಮತಗಳನ್ನು ಕೇಳುತ್ತಿದ್ದರು.  ಈಗ ಅಯ್ಯೋಧ್ಯೆ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ.  ಈಗಿನ ರಾಜಕೀಯ ಬಹಳ ಕೀಳು ಮಟ್ಟವನ್ನ ತಲುಪಿದೆ ಎಂದು ಅವರು ಹೇಳಿದ್ದಾರೆ. 

ಇವತ್ತು ದೇಶದ ಜನ ದಿನನಿತ್ಯ ಬದುಕುವುದೇ ಕಷ್ಟವಾಗಿದೆ. ಬಿಜೆಪಿಯವರು ಹಿಂದು ಎಂದು ಹೇಳ್ತಾರೆ. ಆದ್ರೆ ಗುಡಿ ಹಾಗೂ ಮಸೀದಿ ನಿರ್ಮಾಣ ಮಾಡೋದೆ ಧರ್ಮ ಅಲ್ಲ. ಊಟ ಇಲ್ಲದವರಿಗೆ ಊಟ, ಮನೆ ಇಲ್ಲದವರಿಗೆ ಮನೆ ಕೊಡುವುದೇ ಧರ್ಮ ಎಂದು ಇಬ್ರಾಹಿಂ ಟಾಂಗ್ ನೀಡಿದ್ದಾರೆ. 

ಇನ್ನು ಗೋ ಸಂರಕ್ಷಣೆ ಎಂದು ಅವರು ಉತ್ತರ ಪ್ರದೇಶದಲ್ಲಿ ಪೂಜೆ ಮಾಡ್ತಾರೆ ಆದ್ರೆ ಗೋವಾದಲ್ಲಿ ಏನು ಮಾಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋ ಮಾಂಸ ರಪ್ತು ಹೆಚ್ಚಾಗಿದೆ. ಗೋ ಗಳನ್ನ ಕತ್ತರಿಸುವವರೇ ಬಿಜೆಪಿ ನಾಯಕರು. ಹಲವಾರು ಕಂಪನಿಗಳು ಬಿಜೆಪಿ ಮುಖಂಡರ ಹೆಸರಿನ ಮೇಲಿವೆ.  2019 ಕ್ಕೆ ದೇಶದ ಜನ ಬಿಜೆಪಿಗೆ ಸರಿಯಾಗಿ ಉತ್ತರ ಕೊಡುತ್ತಾರೆ. ಐದು ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಗೆಲುವು ಸಾಧಿಸುತ್ತವೆ ಎಂದಿದ್ದಾರೆ. 

ಇನ್ನು ಇದೇ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮೋದಿಗೆ ಸಾಬರ್(ಮುಸ್ಲಿಂ) ಹೆಂಡಿರ ಚಿಂತೆ ಇದೆ, ರಾಮ ಮಂದಿರ ಚಿಂತೆ ಇಲ್ಲಾ. ಮೋದಿಗೆ ತನ್ನ ಹೆಂಡತಿ ಬಗ್ಗೆ ಗೋತ್ತಿಲ್ಲ, ನಮ್ಮ ಹೆಂಡತಿ ಬಗ್ಗೆ ಮಾತನಾಡುತ್ತಾರೆ. ಮೋದಿ ಹೆಂಡತಿಗೆ ಜೀವನಾಂಶ ಕೋಡ್ತಾ ಇದ್ದಾರಾ ಏನು ಎಂದು ಪ್ರಶ್ನಿಸಿದ್ದಾರೆ.