Asianet Suvarna News Asianet Suvarna News

ರೈತರ ಸಾಲಮನ್ನಾ ಕುರಿತು ಅಪನಂಬಿಕೆ ಬೇಡ: ಮುಖ್ಯಮಂತ್ರಿ ಕುಮಾರಸ್ವಾಮಿ

ಸಹಕಾರಿ, ವಾಣಿಜ್ಯ ಬ್ಯಾಂಕ್​ಗಳಲ್ಲಿ 49 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಲಾಗಿದೆ. ಭಾರತದ ಯಾವ ರಾಜ್ಯದಲ್ಲೂ ಈ ಪ್ರಮಾಣದ ರೈತರ ಸಾಲಮನ್ನಾ ಮಾಡಿಲ್ಲ. ವಾಣಿಜ್ಯ ಬ್ಯಾಂಕ್​ಗಳಲ್ಲಿನ ಸಾಲಮನ್ನಾ ಮಾಡಲು ಸಹ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು. ಸಾಲಮನ್ನಾ ಕುರಿತು ಅಪನಂಬಿಕೆ ಬೇಡ ಎಂದು ರೈತರಿಗೆ ಕಿವಿಮಾತು ಹೇಳಿದರು.

CM HD Kumaraswamy unfurls the national flag at Manekshaw Parade Grounds
Author
Bengaluru, First Published Aug 15, 2018, 10:28 AM IST | Last Updated Sep 9, 2018, 10:08 PM IST

ಬೆಂಗಳೂರು[ಆ.15]: ದೇಶದಾದ್ಯಂತ ಅತ್ಯಂತ ಸಡಗರ, ಸಂಭ್ರಮದಿಂದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಗರದ ಮಾಣಿಕ್ ಷಾ  ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರಾಜ್ಯದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.

ರಾಷ್ಟ್ರಕವಿ ಕುವೆಂಪು ಕವನದಿಂದ ಭಾಷಣ ಆರಂಭಿಸಿದ ಎಚ್’ಡಿಕೆ, ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದ ಪಾತ್ರ ಅದ್ವಿತೀಯ, ಎಲ್ಲ ವೀರ ಸೇನಾನಿಗಳ ಪಾದ ಕಮಲಗಳಿಗೆ ನನ್ನ ನಮನ. ಅಹಿಂಸಾ ಅಸ್ತ್ರದಿಂದ ಸ್ವಾತಂತ್ರ್ಯ ಗೆದ್ದವರು ನಾವು ವೈವಿಧ್ಯತೆಯಲ್ಲಿ ಏಕತೆ ಸಾಧಿಸಿದ ದೇಶ ನಮ್ಮದು. ‘ನನ್ನ ಜೀವನವೇ ನನ್ನ ಸಂದೇಶ ’ಎಂಬ ಮಹಾತ್ಮ  ಗಾಂಧಿ ಮಾತು ನಮಗೆ ಆದರ್ಶ ಎಂದು ಹೇಳಿದರು.
ಹರಿದು ಹಂಚಿಹೋಗಿದ್ದ ಕರ್ನಾಟಕಕ್ಕೆ ಅಸ್ವಿತ್ತ ಕೊಟ್ಟಿದ್ದು ಏಕೀಕರಣ ಚಳವಳಿ. ಕನ್ನಡಕ್ಕೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ, ಎಲ್ಲ ರೀತಿಯಲ್ಲೂ ಕನ್ನಡಕ್ಕೆ ಕನ್ನಡವೇ ಸಾಟಿ ಎಂದು ಹೇಳಿದ ಅವರು, ಅಖಂಡ ಕರ್ನಾಟಕ ಅಸ್ಮಿತೆಗೆ ಕಿಂಚಿತೂ ಭಂಗ ಬಾರದಂತೆ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.  

ಸಹಕಾರಿ, ವಾಣಿಜ್ಯ ಬ್ಯಾಂಕ್​ಗಳಲ್ಲಿ 49 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಲಾಗಿದೆ. ಭಾರತದ ಯಾವ ರಾಜ್ಯದಲ್ಲೂ ಈ ಪ್ರಮಾಣದ ರೈತರ ಸಾಲಮನ್ನಾ ಮಾಡಿಲ್ಲ. ವಾಣಿಜ್ಯ ಬ್ಯಾಂಕ್​ಗಳಲ್ಲಿನ ಸಾಲಮನ್ನಾ ಮಾಡಲು ಸಹ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು. ಸಾಲಮನ್ನಾ ಕುರಿತು ಅಪನಂಬಿಕೆ ಬೇಡ ಎಂದು ರೈತರಿಗೆ ಕಿವಿಮಾತು ಹೇಳಿದರು.

ಬೆಂಗಳೂರಿಗೆ ವಿಶ್ವದರ್ಜೆಯ ಮೂಲ ಸೌಲಭ್ಯ ಕಲ್ಪಿಸುವುದು ದೊಡ್ಡ ಸವಾಲು. ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಮೆಟ್ರೋ 2ನೇ ಹಂತ ಪೆರಿಫೆರಲ್ ರಿಂಗ್ ರೋಡ್, ಉಪನಗರ ರೈಲು ಯೋಜನೆ ಶೀಘ್ರ ಸಾಕಾರವಾಗಲಿದೆ. ಬೆಂಗಳೂರು ಕೆರೆಗಳ ಸಂರಕ್ಷಣೆ, ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೆವಾರಿ, ಬೆಂಗಳೂರು ನಗರ ಫ್ಲೆಕ್ಸ್​ ಮುಕ್ತವಾಗಬೇಕು ಎನ್ನುವುದು ಬೆಂಗಳೂರಿಗರ ಆಸೆ. ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯ ಫ್ಲೆಕ್ಸ್​ ಮುಕ್ತವಾಗಬೇಕು ಫ್ಲೆಕ್ಸ್ ಮುಕ್ತ ಬೆಂಗಳೂರಿಗೆ ಬಿಬಿಎಂಪಿ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios