ರಾಜ್ಯವನ್ನು ಸತತ ಬರಗಾಲ ಕಾಡಿರುವ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂಬ ಕೂಗಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಮೊದಲು ಮನ್ನಾ ಮಾಡಲಿ ಎಂದು ಪುನರುಚ್ಚರಿಸಿದ್ದಾರೆ. ಆದರೆ ಇದೇ ವೇಳೆ, ನಾವು ಸಾಲ ಮನ್ನಾದ ಪರವಾಗಿಯೇ ಇದ್ದೇವೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಕಾಯುತ್ತಿದ್ದೇನೆ. ಇನ್ನೂ ಸ್ವಲ್ಪ ದಿನ ಕಾಯುತ್ತೇನೆ. ಬಳಿಕ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ರೈತರ ಸಾಲಮನ್ನಾ ಮಾಡುವ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.
ಬೆಂಗಳೂರು(ಜೂ.04): ರಾಜ್ಯವನ್ನು ಸತತ ಬರಗಾಲ ಕಾಡಿರುವ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂಬ ಕೂಗಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಮೊದಲು ಮನ್ನಾ ಮಾಡಲಿ ಎಂದು ಪುನರುಚ್ಚರಿಸಿದ್ದಾರೆ. ಆದರೆ ಇದೇ ವೇಳೆ, ನಾವು ಸಾಲ ಮನ್ನಾದ ಪರವಾಗಿಯೇ ಇದ್ದೇವೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಕಾಯುತ್ತಿದ್ದೇನೆ. ಇನ್ನೂ ಸ್ವಲ್ಪ ದಿನ ಕಾಯುತ್ತೇನೆ. ಬಳಿಕ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ರೈತರ ಸಾಲಮನ್ನಾ ಮಾಡುವ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.
ನ್ನ ಅವಧಿಯಲ್ಲಿ 3 ಚಿನ್ನದ ಪದಕ ಬಂದಿದೆ, ಹೇಳಲೇ ಇಲ್ಲ
‘ಎಲ್ಲಾ ಇಲಾಖೆಯ ಸಾಧನೆಯನ್ನು ವಿವರವಾಗಿ ಹೇಳಿದ ಮುಖ್ಯಮಂತ್ರಿಗಳು, ನಾನು ವಸತಿ ಸಚಿವನಾಗಿದ್ದಾಗ ಇಲಾಖೆಗೆ 3 ಚಿನ್ನದ ಪದಕ ಬಂದಿದ್ದನ್ನು ಹೇಳಲೇ ಇಲ್ಲ. ಇದ್ಯಾವ ನ್ಯಾಯ' ಎಂದು ನಟ, ಶಾಸಕ ಅಂಬರೀಶ್ ಮುಖ್ಯಮಂತ್ರಿಗಳ ಕಾಲೆಳೆದರು. ಸಮಾವೇಶದಲ್ಲಿ ಮಾತನಾಡಿ, ‘ಮುಖ್ಯಮಂತ್ರಿ ಅವರು ಸುದೀರ್ಘವಾಗಿ ಎಲ್ಲಾ ವಿಷಯಗಳನ್ನೂ ವಿವರಿಸಿದರು. ನಾನು 230 ಸಿನಿಮಾದಲ್ಲಿ ನಟನೆ ಮಾಡಿದ್ದರೂ ಇಷ್ಟುಡೈಲಾಗ್ ಹೊಡೆದಿಲ್ಲ' ಎಂದು ಹಾಸ್ಯ ಚಟಾಕಿ ಹಾರಿಸಿದರು. ಪ್ರತಿ ಇಲಾಖೆ ಮಾಹಿತಿ ಹೇಳಿದ್ದಾರೆ. ಆದರೆ ವಸತಿ ಇಲಾಖೆಗೆ 3 ಚಿನ್ನದ ಪದಕ ಬಂದರೂ ಹೇಳಿಲ್ಲ. ಹೇಳದಿದ್ದರೂ ಪರವಾಗಿಲ್ಲ ಬಿಡಿ. ಜನರಿಗೆ ಅದು ಗೊತ್ತಿದೆ ಎಂದಾಗ ಎಲ್ಲರೂ ನಕ್ಕರು.
