ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಭಾಷಣ ಮಾಡುತ್ತಾ, ಗುಂಡ್ಲುಪೇಟೆ ಯನ್ನು ಯಡಿಯೂರಪ್ಪ ದತ್ತು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಹೀಗಾಗಿ ದತ್ತು ತೆಗೆದುಕೊಂಡು‌ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಬಿಎಸ್ವೈ ‌ಮಾಡಲಿದ್ದಾರೆ ಎಂದಿದ್ದಾರೆ.
ಬೆಂಗಳೂರು (ಏ.03): ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಭಾಷಣ ಮಾಡುತ್ತಾ, ಗುಂಡ್ಲುಪೇಟೆ ಯನ್ನು ಯಡಿಯೂರಪ್ಪ ದತ್ತು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಹೀಗಾಗಿ ದತ್ತು ತೆಗೆದುಕೊಂಡು ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಬಿಎಸ್ವೈ ಮಾಡಲಿದ್ದಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಸಾಧನೆಯ ಪಟ್ಟಿ ನೋಡಿದ್ರೆ ಬರೀ ಹಗರಣಗಳ ಸರಮಾಲೆ ಆಗಿದೆ. ಗೋವಿಂದ್ ರಾಜ್ ಡೈರಿ, ಸೇರಿದಂತೆ ಹಲವು ಹಗರಣಗಳ ಪಟ್ಟಿಯೇ ಇವೆ. ಹೈ ಕಮಾಂಡ್ ಗೆ ಸಾವಿರಾರು ಕೋಟಿ ರೂ. ಕಪ್ಪ ಕೊಟ್ಟು ಸಿಎಂ ಸೇರಿದಂತೆ ಅವರ ಸಚಿವರು ಕುರ್ಚಿ ಉಳಿಸಿಕೊಂಡಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಸ್ಟೀಲ್ ಬ್ರಿಡ್ಜ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಯೋಜನೆ ಅನುಷ್ಠಾನಕ್ಕೂ ಮುಂಚೆ ಕೋಟಿ ಕೋಟಿ ಹಣವನ್ನು ಕಿಕ್ ಬ್ಯಾಕ್ ಪಡೆದಿದ್ದಾರೆ. ಕೊಟ್ಟೋನು ಕೋಡಂಗಿ ಈಸ್ಕೊಂಡೋನು ವೀರಭದ್ರ ಅಂದಂಗೆ ದುಡ್ಡು ಇಸ್ಕೋಂಡೋರು ಸಿದ್ದರಾಮಯ್ಯ ಎಂದು ಸಿಎಂ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಕ್ಸಮರ ನಡೆಸಿದ್ದಾರೆ.
