ಬೆಂಗಳೂರಿನ ರಾಜಭವನದಲ್ಲಿ ನಡೆದ ರಾಷ್ಟ್ರಪತಿ ಪೊಲೀಸ್ ಪದಕ ಪ್ರಧಾನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲ ವಜುಭಾಯಿವಾಲಾ ಹೆಸರನ್ನು ಮರೆತು, 10 ಸೆಕೆಂಡುಗಳಷ್ಟು ಹೊತ್ತು ತಡವರಿಸಿದರು. ಕೊನೆಗೆ ಆಮಂತ್ರಣ ಪತ್ರಿಕೆಯನ್ನು ತರಿಸಿಕೊಂಡು ರಾಜ್ಯಪಾಲರ ಹೆಸರನ್ನು ಹೇಳಿದ್ದಾರೆ.

ಬೆಂಗಳೂರು(ಅ.20): ರಾಷ್ಟ್ರಪತಿ ಪೊಲೀಸ್ ಪದಕ ಪ್ರಧಾನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ರಾಜ್ಯಪಾಲರ ಹೆಸರು ನೆನಪಿಗೆ ಬಾರದೆ ಸಿಎಂ ಸಿದ್ಧರಾಮಯ್ಯರವರು ಎರಡೆರಡು ಬಾರಿ ತಡವರಿಸಿ ಪೇಚಿಗೀಡಾದ ಘಟನೆ ನಡೆದಿದೆ.

ಬೆಂಗಳೂರಿನ ರಾಜಭವನದಲ್ಲಿ ನಡೆದ ರಾಷ್ಟ್ರಪತಿ ಪೊಲೀಸ್ ಪದಕ ಪ್ರಧಾನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲ ವಜುಭಾಯಿವಾಲಾ ಹೆಸರನ್ನು ಮರೆತು, 10 ಸೆಕೆಂಡುಗಳಷ್ಟು ಹೊತ್ತು ತಡವರಿಸಿದರು. ಕೊನೆಗೆ ಆಮಂತ್ರಣ ಪತ್ರಿಕೆಯನ್ನು ತರಿಸಿಕೊಂಡು ರಾಜ್ಯಪಾಲರ ಹೆಸರನ್ನು ಹೇಳಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯೇ ರಾಜ್ಯಪಾಲರ ಹೆಸರನ್ನು ಮರೆತು ಈ ರೀತಿ ಪರದಾಡಿದ್ದು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.