‘ಮೂಢನಂಬಿಕೆಗಳನ್ನು ಸಿಎಂ ನಂಬೋದಿಲ್ಲ, ವಿಜ್ಞಾನದ ಕಾರ್ಯಕ್ರಮಗಳಿಗೆ ಸಿಎಂ ತಡವಾಗಿ ಬರ್ತಾರೆ’ ಎಂದು ತಡವಾಗಿ ಬಂದ ಸಿಎಂಗೆ ಇಸ್ರೋ ವಿಜ್ಞಾನಿ ಪ್ರೋ. ಯು. ಆರ್ ರಾವ್ ಚುರುಕು ಮುಟ್ಟಿಸಿದ್ದಾರೆ.
ಬೆಂಗಳೂರು (ಡಿ. 20): ‘ಮೂಢನಂಬಿಕೆಗಳನ್ನು ಸಿಎಂ ನಂಬೋದಿಲ್ಲ, ವಿಜ್ಞಾನದ ಕಾರ್ಯಕ್ರಮಗಳಿಗೆ ಸಿಎಂ ತಡವಾಗಿ ಬರ್ತಾರೆ’ ಎಂದು ತಡವಾಗಿ ಬಂದ ಸಿಎಂಗೆ ಇಸ್ರೋ ವಿಜ್ಞಾನಿ ಪ್ರೋ. ಯು. ಆರ್ ರಾವ್ ಚುರುಕು ಮುಟ್ಟಿಸಿದ್ದಾರೆ.
ಕ್ರೈಸ್ಟ್ ಕಾಲೇಜಿನಲ್ಲಿಂದು ಇಸ್ರೋ ಅಧ್ಯಕ್ಷ ಡಾ. ಕಿರಣ್ ಕುಮಾರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ತಡವಾಗಿ ಬಂದರು. ಇದಕ್ಕೆ ತಮ್ಮ ಭಾಷಣದ ವೇಳೆ ಚುರುಕು ಮುಟ್ಟಿಸಿದ ಪ್ರೊ. ಯು. ಆರ್. ರಾವ್, ಸಿದ್ದರಾಮಯ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಬೆಂಬಲಿಸುತ್ತಿದ್ದಾರೆ. ಮೂಢನಂಬಿಕೆಗಳನ್ನು ಸಿಎಂ ನಂಬೋದಿಲ್ಲ. ಆದರೆ ವಿಜ್ಞಾನ ಕಾರ್ಯಕ್ರಮಗಳಿಗೆ ಸಿಎಂ ಒಮ್ಮೊಮ್ಮೆ ತಡವಾಗಿ ಬರ್ತಾರೆ ಅಂತ ಕಾಲೆಳೆದರು.
ಪ್ರೊ. ಯು.ಆರ್.ರಾವ್ ಟೀಕೆಗೆ ಸಿಎಂ ಉತ್ತರ
‘ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ತಡವಾಗಿ ಬಂದಿಲ್ಲ. ನಮ್ಮನ್ನು ನೋಡಲು ಜನರು ಬಂದಿರುತ್ತಾರೆ. ಜನರನ್ನು ಮಾತನಾಡಿಸದೇ ಬರುವುದಿಕ್ಕೆ ಆಗೋದಿಲ್ಲ. ಜನರನ್ನು ಮಾತನಾಡಿಸದಿದ್ರೆ ನಾವು ಅನ್ ಪಾಪ್ಯುಲರ್ ಆಗ್ತೇವೆ ಎಂದು ರಾವ್ ಟೀಕೆಗೆ ಸಿಎಂ ಸಿದ್ದರಾಮ್ಯಯ ಸ್ಪಷ್ಟನೆ ನೀಡಿದರು.
