‘ಜೇಮ್ಸ್ ಬಾಂಡ್’ ಕಾರು ಉದ್ಘಾಟನೆ ದಿನವೇ ಫ್ಲಾಪ್!
‘ಜೇಮ್ಸ್ ಬಾಂಡ್’ ಕಾರು ಉದ್ಘಾಟನೆ ದಿನವೇ ಫ್ಲಾಫ್!| ಎಲೆಕ್ಟ್ರಿಕ್ ಬ್ಯಾಟರಿಯಿಂದ ಚಾಲಿತವಾಗುವ ನೂತನ ಮಾದರಿಯ ಕಾರು| ಲೋಹದ ಚೆಂಡಿನ ಹೊಡೆತಕ್ಕೆ ಕಾರಿನ ಗಾಜು ಪುಡಿಪುಡಿ
ಲಾಸ್ ಏಂಜೆಲೀಸ್[ನ.23]: ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ ಸಿದ್ಧಪಡಿಸಿದ ನೂತನ ಮಾದರಿಯ ಎಲೆಕ್ಟ್ರಿಕ್ ಕಾರಿನ ಉದ್ಘಾಟನೆ ಸಮಾರಂಭವು ಫ್ಲಾಪ್ ಶೋ ಆದ ಘಟನೆ ಲಾಸ್ ಏಂಜೆಲೀಸ್‌ನಲ್ಲಿ ನಡೆದಿದೆ.
‘ದ ಸ್ಪೈ ವೂ ಲವ್ಡ್ ಮೀ’ ಜೇಮ್ಸ್ ಬಾಂಡ್ ಚಲನಚಿತ್ರದಲ್ಲಿ ಬಳಸಲಾದ ಲೋಟಸ್ ಎಸ್ಟ್ರಿಟ್ ಸ್ಪೋಟ್ಸ್‌ರ್ ಕಾರ್‌ನಿಂದ ಪ್ರೇರಣೆಗೊಂಡ, ಎಲೆಕ್ಟ್ರಿಕ್ ಬ್ಯಾಟರಿಯಿಂದ ಚಾಲಿತವಾಗುವ ನೂತನ ಮಾದರಿಯ ಕಾರನ್ನು ಟೆಸ್ಲಾ ತಯಾರಿಸಿದೆ. ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭದಲ್ಲಿ ಕಾರಿನ ಸಾಮರ್ಥ್ಯವನ್ನು ವಿವರಿಸಿದ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಅವರು, ಕಾರಿನ ಗಾಜು ಎಷ್ಟುಗಟ್ಟಿಯಿದೆ ಎಂಬುದರ ಪರೀಕ್ಷೆಗಾಗಿ ಕಿಟಕಿ ಗಾಜಿಗೆ ಲೋಹದ ಬಾಲ್‌ನಿಂದ ಹೊಡೆಯಲು ವಿನ್ಯಾಸಗಾರನಿಗೆ ಹೇಳಿದ್ದಾರೆ.
ಈ ವೇಳೆ ಲೋಹದ ಚೆಂಡಿನ ಹೊಡೆತಕ್ಕೆ ಕಾರಿನ ಗಾಜು ಪುಡಿಪುಡಿಯಾಗಿದೆ. ಈ ಸಂದರ್ಭದಲ್ಲಿ ಒಂದು ಕ್ಷಣ ಅವಕ್ಕಾದ ಎಲಾನ್ ಮಸ್ಕ್, ಓಹ್ ನನ್ನ ದೇವರೇ, ಏನಿದು? ಎಂದು ಆಶ್ಚರ್ಯಚಕಿತರಾಗಿದ್ದಾರೆ. ಈ ಮೂಲಕ ಕಾರು ಉದ್ಘಾಟನೆ ಸಮಾರಂಭವು ನಗೆಪಾಟಿಲಿಗೀಡಾಗಿದೆ.
ಆದಾಗ್ಯೂ, ಈ ಹಿಂದೆ ರಿಂಚುಗಳು, ಅಡುಗೆ ಕೋಣೆಯ ಸಿಂಕ್‌ಗಳಿಂದ ಹೊಡೆದಾಗಲೂ ಕಾರಿನ ಗಾಜಿಗೆ ಹಾನಿಯಾಗಿರಲಿಲ್ಲ. ಆದರೆ, ಈಗ ಯಾಕೆ ಈ ರೀತಿಯಾಗುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಸಬೂಬು ಹೇಳಿದೆ ಸಂಸ್ಥೆ.
ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: