ಇದೇ ಕ್ಷೇತ್ರದಲ್ಲಿ ಸಿಎಂ ಪರಮಾಪ್ತ, ಬಲಗೈ ಬಂಟ ಎನಿಸಿಕೊಳ್ಳುವ ಡಾ.ಎಚ್.ಸಿ.ಮಹದೇವಪ್ಪ ತಮ್ಮ ಮೂಲ ಕ್ಷೇತ್ರ ಟಿ. ನರಸೀಪುರವನ್ನು ಪುತ್ರ ಸುನೀಲ್ ಬೋಸ್ ಅವರಿಗೆ ಬಿಟ್ಟುಕೊಟ್ಟು ತಾವು ಸ್ಪರ್ಧಿಸಲು ಲೆಕ್ಕಾಚಾರ ನಡೆಸಿದ್ದರು.
ಮೈಸೂರು(ಜ.11): ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ 2018ರ ವಿದಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳಲೆ ಕೇಶವಮೂರ್ತಿ ಅವರು ಸ್ಪರ್ಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ನಂಜನಗೂಡು ಕ್ಷೇತ್ರಕ್ಕೆ 2018ರ ಚುನಾವಣೆಗೆ ಕಳಲೆ ಕೇಶವಮೂರ್ತಿ ಅವರಿಗೆ ಟಿಕೆಟ್ ನೀಡುವುದಾಗಿ ಎಂದು ಹೇಳುತ್ತಿದ್ದಂತೆ ಕೇಶವಮೂರ್ತಿ ಅವರ ಮುಖದಲ್ಲಿ ಮಂದಹಾಸ ಮೂಡಿತು. ಬಹಿರಂಗ ಸಭೆಯಲ್ಲಿಯೇ ಸಿಎಂ ಕಾಲಿಗೆ ಅವರು ನಮಸ್ಕರಿಸಿದರು. ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್'ನಿಂದ ಬಂಡೆದ್ದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಸೋಲಿಸಿದ್ದರು.
ಇದೇ ಕ್ಷೇತ್ರದಲ್ಲಿ ಸಿಎಂ ಪರಮಾಪ್ತ, ಬಲಗೈ ಬಂಟ ಎನಿಸಿಕೊಳ್ಳುವ ಡಾ.ಎಚ್.ಸಿ.ಮಹದೇವಪ್ಪ ತಮ್ಮ ಮೂಲ ಕ್ಷೇತ್ರ ಟಿ. ನರಸೀಪುರವನ್ನು ಪುತ್ರ ಸುನೀಲ್ ಬೋಸ್ ಅವರಿಗೆ ಬಿಟ್ಟುಕೊಟ್ಟು ತಾವು ಸ್ಪರ್ಧಿಸಲು ಲೆಕ್ಕಾಚಾರ ನಡೆಸಿದ್ದರು. ಸಿಎಂ ನಡೆ ಮಹದೇವಪ್ಪ ಅವರ ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ.
