ಚಾಮರಾಜನಗರ(ಸೆ.19): ನನ್ನ ಪುತ್ರ ಯತೀಂದ್ರ ಯಾವುದೇ ಸಭೆ ನಡೆಸಿಲ್ಲ ವಿಪಕ್ಷಗಳು ವಿನಾ ಕಾರಣ ಆರೋಪ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಮರಾಜನಗರದಲ್ಲಿ ಮಾತನಾಡಿದ ಅವರು, ಅಲ್ಲಿ ಸಭೆ ನಡೆಸಿರುವುದು ನನ್ನ ಕಾರ್ಯದರ್ಶಿ ರಾಮಯ್ಯ. ನನ್ನ ಕ್ಷೇತ್ರದ ಸಮಸ್ಯೆ ನೋಡಿಕೊಳ್ಳುವಂತೆ ನನ್ನ ಕಾರ್ಯದರ್ಶಿಗೆ ಹೇಳಿದ್ದೇನೆ. ಹೀಗಾಗಿ ಅವರು ಸಭೆ ನಡೆಸಿದ್ದಾರೆ. ನನ್ನ ಪುತ್ರ ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ ಎಂದು ಸಭೆ ನಡೆದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದರು. ಜನಪ್ರತಿನಿಧಿಯಲ್ಲದ ಯತೀಂದ್ರರವರು ಹೇಗೆ ಒಂದು ತಿಂಗಳಿನಿಂದ ಪದೇ ಪದೇ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿತ್ತು.