ದೀಪಕ್ ರಾವ್ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ಬಗ್ಗೆ  ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಹಾಸನ (ಜ.05): ದೀಪಕ್ ರಾವ್ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ಬಗ್ಗೆ ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೀಪಕ್ ಹತ್ಯೆಯ ಹಿಂದೆ ಸಚಿವ ರಮಾನಾಥ್ ರೈ ಕೈವಾಡವಿದೆ ಎನ್ನುವ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿರುವಂತದ್ದು. ಈ ಘಟನೆಯ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಈಗಾಗಲೇ ಆರೋಪಿಗಳನ್ನೂ ಕೂಡ ಬಂಧಿಸಲಾಗಿದೆ. ಪಿಎಫ್ಐ ಮೊದಲಾದ ಸಂಘಟನೆಗಳ ನಿಷೇಧಿಸುವ ಬಗ್ಗೆ ತನಿಖೆ ಮುಗಿದ ಬಳಿಕವಷ್ಟೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಇನ್ನು ರಾಜ್ಯದಲ್ಲಿ ಮಹಾಮೈತ್ರಿ ಮಾಡಿಕೊಳ್ಳುವುದಿಲ್ಲ. ಇನ್ನು ಸೀತಾರಾಂ ಯಚೂರಿ ಹೇಳಿಕೆ ರಾಷ್ಟ್ರಮಟ್ಟಕ್ಕೆ ಸೀಮಿತವಾದುದು. ಕೋಮುಶಕ್ತಿಗಳ ವಿರುದ್ಧ ದೇಶದಲ್ಲಿ ಮೈತ್ರಿಯಾಗಬಹುದು. ಆದರೆ ರಾಜ್ಯದಲ್ಲಿ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಈ ವೇಳೆ ಹೇಳಿದ್ದಾರೆ.