ಹಿಂದಿಯನ್ನು ತಮಿಳುನಾಡು ಮತ್ತು ಕೇರಳ ಮೆಟ್ರೋದಲ್ಲಿ ಹೇರಿಕೆ ಮಾಡಿಲ್ಲ. ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಅಗತ್ಯವಿಲ್ಲ. ತ್ರಿಭಾಷಾ ನೀತಿಯಿದ್ದರೂ ಕನ್ನಡ ಮತ್ತು ಇಂಗ್ಲೀಷನ್ನ ಮಾತ್ರ ಬಳಸಲು ಬಿಎಂಆರ್’ಸಿಲ್ ಗೆ ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬೆಂಗಳೂರು (ಜು.05): ಹಿಂದಿಯನ್ನು ತಮಿಳುನಾಡು ಮತ್ತು ಕೇರಳ ಮೆಟ್ರೋದಲ್ಲಿ ಹೇರಿಕೆ ಮಾಡಿಲ್ಲ. ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ಅಗತ್ಯವಿಲ್ಲ. ತ್ರಿಭಾಷಾ ನೀತಿಯಿದ್ದರೂ ಕನ್ನಡ ಮತ್ತು ಇಂಗ್ಲೀಷನ್ನ ಮಾತ್ರ ಬಳಸಲು ಬಿಎಂಆರ್’ಸಿಲ್ ಗೆ ನಿರ್ದೇಶನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮೆಟ್ರೋದಲ್ಲಿ ಹಿಂದಿ ಬಳಕೆಯನ್ನು ನಿಲ್ಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎ. ನಾರಾಯಣ ಗೌಡ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿಯನ್ನು ಸ್ವೀಕರಿಸಿದ ಸಿಎಂ ಹಿಂದಿಯನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಸಿಎಂ ಸೂಚನೆಯನ್ನು ಬಿಎಂಆರ್’ಸಿಎಲ್ ಪಾಲಿಸುವುದೋ ಇಲ್ಲವೋ ಎಂದು ಒಂದು ವಾರ ಕಾದು ನೋಡುತ್ತೇವೆ. ಒಂದು ವೇಳೆ ಪಾಲಿಸದಿದ್ದರೆ ಮೆಟ್ರೋ ಬೋರ್ಡ್’ಗಳಲ್ಲಿ ಹಿಂದಿಯನ್ನು ಅಳಿಸಿ ಹಾಕುತ್ತೇವೆ ಎಂದು ನಾರಾಯಣ ಗೌಡ ಹೇಳಿದ್ದಾರೆ.
