ನಮ್ಮಲ್ಲಿ ಕೆಲವು ವಿಕೃತ ಮನಸ್ಸಿನ ಅಧಿಕಾರಿಗಳಿದ್ದಾರೆ. ಕೆಲವರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ.

ಬೆಂಗಳೂರು(ಮಾ.17): ಕನ್ನಡದ ವಿರುದ್ಧ ಕ್ಯಾತೆ ತೆಗೆದ ದೆಹಲಿ ಮೂಲದ ಐಎಎಸ್ ಅಧಿಕಾರಿಗೆ ನೋಟಿಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದೀಯ ವ್ಯವಹಾರ ಖಾತೆ ಸಚಿವ ಟಿ.ಬಿ. ಜಯಚಂದ್ರ ಖಾರವಾಗಿ ಪ್ರತಿಕ್ರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಐಎಎಸ್ ಅಧಿಕಾರಿ ಶ್ರೀವತ್ಸಾ ಕನ್ನಡ ವಿರೋಧಿ ಧೋರಣೆ ತಪ್ಪು. ಈ ಬಗ್ಗೆ ನಾನು ಮಾಹಿತಿ ಪಡೆಯುತ್ತೇನೆ. ಯಾವುದೇ ಅಧಿಕಾರಿ ಹೀಗೆ ಹೇಳುವುದು ಸರಿಯಲ್ಲ. ಆಡಳಿತ ಭಾಷೆ ಕನ್ನಡ, ಅದು ಪಾಲನೆ ಆಗಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು'ಎಂದು ತಿಳಿಸಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಪ್ರತಿಕ್ರಯಿಸಿ, ನಮ್ಮಲ್ಲಿ ಕೆಲವು ವಿಕೃತ ಮನಸ್ಸಿನ ಅಧಿಕಾರಿಗಳಿದ್ದಾರೆ

ಕೆಲವರು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಕನ್ನಡ ವಿರೋಧಿ ಧೋರಣೆಯನ್ನು ಸಹಿಸಲ್ಲ.ಇಂದೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಜೊತೆ ಮಾತನಾಡ್ತೀನಿ.ಕನ್ನಡ ವಿರೋಧಿ ಅಧಿಕಾರಿ ಶ್ರೀವತ್ಸ ಕೃಷ್ಣಗೆ ತಕ್ಕ ಶಾಸ್ತಿ ಮಾಡ್ತೇನೆ ಎಂದು ಅಧಿಕಾರಿಯ ವಿರುದ್ಧ ಕಿಡಿಕಾರಿದರು.