ವೀರಯೋಧನಿಗೆ ಗೌರವ ಸಲ್ಲಿಸಲು ಬರಲೇ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ. ದುರಂತ ಅಂದ್ರೆ, ಕಳೆದ ವಾರ ಅಂದ್ರೆ ನವೆಂಬರ್​ 22ರಂದು ರಮೇಶ್​ ಜಾರಕಿಹೊಳಿ ಪುತ್ರನ  ವಿವಾಹದ ಬಳಿಕ ಹೆಲಿಕಾಪ್ಟರ್​ನಲ್ಲಿ ಹೋಗಿ ಶುಭಾಶಯ ಹೇಳಿಬಂದಿದ್ದ ಸಿಎಂ ಸಾಹೇಬ್ರಿಗೆ ಹುತಾತ್ಮನಿಗೆ ಅಂತಿಮ ನಮನ ಸಲ್ಲಿಸಲು ಹೆಲಿಕಾಪ್ಟರ್ ಸಿಗಲಿಲ್ಲವೇ ಅನ್ನೋ ಪ್ರಶ್ನೆ ಕಾಡ್ತಿದೆ.  

ಬೆಂಗಳೂರು (ಡಿ.01): ದೇಶಕ್ಕಾಗಿ ಪ್ರಾಣತೆತ್ತ ವೀರಯೋಧ ಅಕ್ಷಯ್ ಅಂತಿಮ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಗೈರಾಗಿದ್ದರು.

ವೀರಯೋಧನಿಗೆ ಗೌರವ ಸಲ್ಲಿಸಲು ಬರಲೇ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ. ದುರಂತ ಅಂದ್ರೆ, ಕಳೆದ ವಾರ ಅಂದ್ರೆ ನವೆಂಬರ್​ 22ರಂದು ರಮೇಶ್​ ಜಾರಕಿಹೊಳಿ ಪುತ್ರನ ವಿವಾಹದ ಬಳಿಕ ಹೆಲಿಕಾಪ್ಟರ್​ನಲ್ಲಿ ಹೋಗಿ ಶುಭಾಶಯ ಹೇಳಿಬಂದಿದ್ದ ಸಿಎಂ ಸಾಹೇಬ್ರಿಗೆ ಹುತಾತ್ಮನಿಗೆ ಅಂತಿಮ ನಮನ ಸಲ್ಲಿಸಲು ಹೆಲಿಕಾಪ್ಟರ್ ಸಿಗಲಿಲ್ಲವೇ ಅನ್ನೋ ಪ್ರಶ್ನೆ ಕಾಡ್ತಿದೆ.

ನವ ವಧುವರರಿಗೆ ಶುಭಾಶಯ ಹೇಳಲು ಹೆಲಿಕಾಪ್ಟರ್ ಸಿಗುತ್ತೆ, ಆದ್ರೆ, ವೀರಯೋಧನ ಅಂತಿಮ ದರ್ಶನಕ್ಕೆ ಬರಲು ಹೆಲಿಕಾಪ್ಟರ್ ಸಿಗಲಿಲ್ಲವೇ? ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಬರಲು ಇದ್ದ ಅಡ್ಡಿ ಏನು? ಎಂಬ ಪ್ರಶ್ನೆ ಕಾಡತೊಡಗಿದೆ. ಕೇವಲ ಟ್ವಿಟರ್ ಮೂಲಕವೇ ಸಿಎಂ ಸಿದ್ದರಾಮಯ್ಯ, ಅಂತಿಮ ನಮನ ಸಲ್ಲಿಸಿದರು.

ಸರ್ಕಾರದ ಪರವಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಂತಿಮಯಾತ್ರೆ ವೇಳೆ ಹಾಜರಾಗಿದ್ದರು.