ಒಂದೆಡೆ  ಬೆಂಗಳೂರಲ್ಲಿ ಭಾರೀ ಚಳಿ ಇದ್ದರೆ ಇನ್ನೊಂದೆಡೆ ತುಂತುರು ಹನಿಗಳ ಸಿಂಚನವಾಗಿದೆ. ಇದರಿಂದ ಬೆಳಗ್ಗೆ ಬೆಳಗ್ಗೆ ಕೆಲಸಕ್ಕೆ ಹೊರಡುವ ಮಂದಿ  ಛತ್ರಿ, ಜರ್ಕಿನ್ ಹುಡುಕಬೇಕಾಯಿತು.

ಬೆಂಗಳೂರು(ನ.30): ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಹನಿ ಹನಿ ಮಳೆಯಾಗಿದೆ. ಒಂದೆಡೆ ಬೆಂಗಳೂರಲ್ಲಿ ಭಾರೀ ಚಳಿ ಇದ್ದರೆ ಇನ್ನೊಂದೆಡೆ ತುಂತುರು ಹನಿಗಳ ಸಿಂಚನವಾಗಿದೆ. ಇದರಿಂದ ಬೆಳಗ್ಗೆ ಬೆಳಗ್ಗೆ ಕೆಲಸಕ್ಕೆ ಹೊರಡುವ ಮಂದಿ ಛತ್ರಿ, ಜರ್ಕಿನ್ ಹುಡುಕಬೇಕಾಯಿತು.ವಾಯುಭಾರ ಕುಸಿತದ ಪರಿಣಾಮವಾಗಿ ಮೋಡ ಕವಿದ ವಾತಾವರಣವಿದ್ದು, ಇನ್ನೆರಡು ದಿನಗಳ ಕಾಲವೂ ಬೆಂಗಳೂರು ಕವೆಯನ್ನು ಇನ್ನಷ್ಟು ತಣ್ಣಗೆ ಮಾಡಲಿದೆ ಎನ್ನಲಾಗಿದೆ.