ನ್ಯೂಯಾರ್ಕ್ (ಸೆ.29): ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ಸೋಮವಾರ ನಡೆದ ಮೊದಲನೇ ಸಂವಾದ ದಾಖಲೆ ನಿರ್ಮಿಸಿದೆ.
ವಾದನ್ನು 8.4 ಕೋಟಿ ಜನ ವೀಕ್ಷಿಸಿದ್ದಾರೆ. ಇದರಿಂದ 36 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಂತಾಗಿದೆ.
1980ರಲ್ಲಿ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ರೊನಾಲ್ಡ್ ರೇಗನ್ ನಡುವೆ ನಡೆದಿದ್ದ ಸಂವಾದವನ್ನು 8.06 ಕೋಟಿ ಜನ ವೀಕ್ಷಿಸಿದ್ದರು.
