ಬೆಂಗಳೂರು(ಸೆ.26): ಇತ್ತೀಚಿಗಷ್ಟೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ ಜಾರ್ಜ್‌ಗೆ ಶೀಘ್ರದಲ್ಲೇ ಕ್ಲಿನ್ ಚಿಟ್ ದೊರೆತು ಇಂದು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವು ಪ್ರಕರಣಗಳಿಗೆ ಅದೆಷ್ಟೋ ವರ್ಷಗಳಾದರೂ ಕ್ಲೀನ್ ಚಿಟ್ ದೊರಕುವುದಿಲ್ಲ. ಕೆ.ಜೆ ಜಾರ್ಜ್‌ಗೆ ಕೇವಲ 3 ತಿಂಗಳಲ್ಲೇ ಸಿಐಡಿ ಕ್ಲಿನ್ ಚಿಟ್ ನೀಡಿದೆ. ಇನ್ನೂ ಇದೇ ರೀತಿ ತ್ವರಿತ ಗತಿಯಲ್ಲಿ ಕೆಲವು ಪ್ರಕರಣಗಳಿಗೆ ಕ್ಲೀನ್ ಚಿಟ್ ದೊರೆತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೀಘ್ರ ಕ್ಲೀನ್ ಚಿಟ್ ಸಿಕ್ಕ ಕೇಸ್‌ಗಳು

1) ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಪ್ರಕರಣ ದಾಖಲಾದ ಮೂರೇ ತಿಂಗಳಲ್ಲಿ. ಕೆ.ಜೆ ಜಾರ್ಜ್ ಸೇರಿ ಮೂವರಿಗೆ ಕ್ಲೀನ್ ಚಿಟ್

2) ಅತ್ಯಾಚಾರ ಆರೋಪ ಪ್ರಕರಣ - ಒಂದು ವರ್ಷದ ನಂತರ ರಾಘೇಶ್ವರ ಶ್ರೀಗಳಿಗೆ ಕ್ಲೀನ್‌ಚಿಟ್

3) ಅರವಿಂದ್ ಜಾದವ್ - ಅಕ್ರಮ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದೇ ವಾರದಲ್ಲಿ ಸಜಿಲ್ಲಾಧಿಕಾರಿಯಿಂದ ಕ್ಲೀನ್​ ಚಿಟ್​

4) ಜವಾಹರ್ ನೆಹರು ವಿವಿಯಲ್ಲಿ ದೇಶವಿರೋಧಿ ಘೋಷಣೆ ಪ್ರಕರಣ- ದೆಹಲಿ ಸರ್ಕಾರದಿಂದ ಒಂದೇ ತಿಂಗಳಲ್ಲಿ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಗೆ ಕ್ಲೀನ್ ಚಿಟ್

5) ಕಾಫಿ ಶಾಫ್‌ನಲ್ಲಿ ಯುವತಿ ಫೋಟೋ ತೆಗೆದ ಪ್ರಕರಣ- ಒಂದೇ ತಿಂಗಳಲ್ಲಿ ಸಿಐಡಿಯಿಂದ ಎಡಿಜಿಪಿ ರವೀಂದ್ರನಾಥ್‌ಗೆ ಕ್ಲೀನ್ ಚಿಟ್