ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ!

Class 9 Boy Found Murdered In Sainik School Toilet In Karnataka
Highlights

ಶಾಲಾ ಶೌಚಾಲಯದಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ

ಕರ್ನಾಟಕದ ಸೈನಿಕ ಶಾಲೆಯಲ್ಲಿ ಘಟನೆ

ಅದೇ ಶಾಲೆಯಲ್ಲಿ ತಂದೆ ಕ್ರೀಡಾ ಶಿಕ್ಷಕ

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ

ಕುಶಾಲನಗರ(ಜೂ.25): ಗುಜರಾತ್ ವಡೋದರಾ ಶಾಲೆಯೊಂದರ ಶೌಚಾಲಯದಲ್ಲಿ ಬಾಲಕನ ಮೃತದೇಹ ಪತ್ತೆಯಾದ ಘಟನೆ ಮಾಸುವ ಮುನ್ನವೇ ಕರ್ನಾಟಕದಲ್ಲೂ ಅಂತದ್ದೇ ಘಟನೆ ನಡೆದಿರುವುದು ರಾಜ್ಯವನ್ನು ಬೆಚ್ಚಿ ಬೀಳಿಸಿದೆ.

ಸೈನಿಕ ಶಾಲೆಯ 9ನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆದಿದೆ. ಮಾದಾಪುರ ಗ್ರಾಮದ ನಿವಾಸಿ ಚಿಂಗಪ್ಪ (14)  ಸಾವನ್ನಪ್ಪಿದ್ದು, ಈತ ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮದ ನಿವಾಸಿ ಪೂವಯ್ಯ ಎಂಬವರ ಪುತ್ರನಾಗಿದ್ದು ಶನಿವಾರ ಶಾಲೆಗೆ ತೆರಳಿದ್ದಾಗ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. 

ಅನಾರೋಗ್ಯಕ್ಕೀಡಾದ ಚಿಂಗಪ್ಪನನ್ನು ಶಾಲಾ ಸಿಬ್ಬಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ವೈದ್ಯರು ಪರೀಕ್ಷೆ ನಡೆಸಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಬಾಲಕನ  ತಂದೆ ಅದೇ ಶಾಲೆಯಲ್ಲಿ ಕ್ರೀಡಾ ಶಿಕ್ಷಕರಾಗಿದ್ದಾರೆ.

ವಿದ್ಯಾರ್ಥಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಆತನ ಪೋಷಕರು, ಗ್ರಾಮಸ್ಥರು ಹಾಗೂ ಕೆಲ ಸಂಘಟನೆಗಳು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.  ಜಿಲ್ಲಾಧಿಕಾರಿ ಹಾಗೂ ಸೈನಿಕ ಶಾಲೆಯ ಪ್ರಾಂಶುಪಾಲರು ಸ್ಥಳಕ್ಕೆ ಆಗಮಿಸಿ ಘಟನೆಗೆ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

loader