ಫೇಸ್'ಬುಕ್ ಬಳಿಕ ಜನಪ್ರಿಯತೆ ಗಳಿಸಿ, ದೈನಂದಿನ ಅಗತ್ಯಗಳ ಭಾಗವಾಗಿದ್ದ ವಾಟ್ಸ್'ಆಯಪ್'ನ್ನು ಭಾರತದ ನೆರೆ ರಾಷ್ಟ್ರ ಚೀನಾದಲ್ಲಿ ನಿಷೇಧಿಸಲಾಗಿದೆ. ಸೆಪ್ಟೆಂಬರ್ 25ರಿಂದ ಇಲ್ಲಿ ವಾಟ್ಸಾಪ್ ನಿಷೇಧಿಸಿರುವುದಾಗಿ ಚೀನಾದ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಪ್ರಕಟಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಬೀಜಿಂಗ್(ಸೆ.26): ಫೇಸ್'ಬುಕ್ ಬಳಿಕ ಜನಪ್ರಿಯತೆ ಗಳಿಸಿ, ದೈನಂದಿನ ಅಗತ್ಯಗಳ ಭಾಗವಾಗಿದ್ದ ವಾಟ್ಸ್'ಆಯಪ್'ನ್ನು ಭಾರತದ ನೆರೆ ರಾಷ್ಟ್ರ ಚೀನಾದಲ್ಲಿ ನಿಷೇಧಿಸಲಾಗಿದೆ. ಸೆಪ್ಟೆಂಬರ್ 25ರಿಂದ ಇಲ್ಲಿ ವಾಟ್ಸಾಪ್ ನಿಷೇಧಿಸಿರುವುದಾಗಿ ಚೀನಾದ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಪ್ರಕಟಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಷೇಧವೇಕೆ?

ವ್ಯಾಟ್ಸಪ್ ಸೇರಿದಂತೆ ಇತರ ಹಲವು ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಇದಕ್ಕೆ ಕಾರಣ ನೀಡಿರುವ ಚೀನಾ ಇಂಟರ್ನೆಟ್ ಮೂಲಕ ನಡೆಯುತ್ತಿರುವ ಅಕ್ರಮಗಳ ಮೇಲೆ ಕಣ್ಣಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಆದರೆ ವ್ಯಾಟ್ಸಪ್ ಸಂಸ್ಥೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.