ಸ್ಥಳೀಯರ ಆರಂಭಿಸಿದ ಕಲ್ಲು ತೂರಾಟದಿಂದ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬಹಳ ತೊಂದರೆಯಾಯಿತು. ಒಂದು ಕಡೆ ಉಗ್ರ ವಿರುದ್ಧ ಹೋರಾಡುತ್ತಾ ಇನ್ನೊಂದು ಕಡೆ ಸ್ಥಳೀಯರ ಕಲ್ಲಗಳನ್ನು ಎದುರಿಸಬೇಕಾಯಿತು, ಎಂದು ಸಿಆರ್'ಪಿಎಫ್ ಡಿಐಜಿ ಡಾ. ಸಂಜಯ್ ಕುಮಾರ್ ತಿಳಿಸಿದ್ದಾರೆ.
ಬುಡ್ಗಾಮ್, ಜಮ್ಮು & ಕಾಶ್ಮೀರ (ಮಾ.28): ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬುಡ್ಗಾಮ್'ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸೇನೆ ಮತ್ತು ನಾಗರಿಕರ ನಡುವೆ ಘರ್ಷಣೆ ಉಂಟಾಗಿ ಮೂವರು ನಾಗರಿಕರು ಹತರಾಗಿದ್ದಾರೆ.
ಕಲ್ಲು ತೂರಾಟದಲ್ಲಿ 43 ಸಿಆರ್'ಪಿಎಫ್ ಯೋಧರು ಹಾಗೂ 20 ಪೊಲೀಸರು ಗಾಯಗೊಂಡಿದ್ದರೆ, ಸೇನಾ ಕಾರ್ಯಾಚರಣೆಯಲ್ಲಿ 17 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಸ್ಥಳೀಯರ ಆರಂಭಿಸಿದ ಕಲ್ಲು ತೂರಾಟದಿಂದ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬಹಳ ತೊಂದರೆಯಾಯಿತು. ಒಂದು ಕಡೆ ಉಗ್ರರ ವಿರುದ್ಧ ಹೋರಾಡುತ್ತಾ ಇನ್ನೊಂದು ಕಡೆ ಸ್ಥಳೀಯರ ಕಲ್ಲುಗಳನ್ನು ಎದುರಿಸಬೇಕಾಯಿತು, ಎಂದು ಸಿಆರ್'ಪಿಎಫ್ ಡಿಐಜಿ ಡಾ. ಸಂಜಯ್ ಕುಮಾರ್ ತಿಳಿಸಿದ್ದಾರೆ.
ಈ ರೀತಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಸ್ಥಳೀಯರು ಅಡ್ಡಿಪಡಿಸಬಾರದು ಎಂದು ಸಂಜಯ್ ಕುಮಾರ್ ಈ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಪಾಕಿಸ್ತಾನ ಕಾರಣ?
ಇಂದು ನಡೆದ ಸೇನೆ ಹಾಗೂ ನಾಗರಿಕರ ನಡುವಿನ ಘರ್ಷಣೆಯಲ್ಲಿ ಪಾಕಿಸ್ತಾನದ ಕೈವಾಡವಿದೆಯೆಂದು ಉನ್ನತ ಮೂಲಗಳು ತಿಳಿಸಿವೆಯೆಂದು ಏಎನ್'ಐ ವರದಿ ಮಾಡಿದೆ.
(ಫೋಟೋ ಕೃಪೆ: ಏಎನ್ಐ)
