ಇತ್ತೀಚಿನ ಪಾಲಿಕೆ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಗಳು ವಿಐಪಿ ಲುಕ್‌ನಲ್ಲಿ ಕಾಣಿಸಿಕೊಳ್ಳದೇ ಜನಸಾಮಾನ್ಯರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಲು ಜನ ವಿಫಲರಾದರು ಎಂದು ಆತ್ಮಾವಲೋಕನ ಸಭೆಯಲ್ಲಿ ಬಹುತೇಕರು ಅಭಿಪ್ರಾಯಪಟ್ಟರು. ಶಾಸಕರು ಕೂಡ ಇದಕ್ಕೆ ದನಿಗೂಡಿಸಿದರು.
ನವದೆಹಲಿ(ಮೇ.04): ಇತ್ತೀಚಿನ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಕ್ಕೆ ಆತ್ಮಾವಲೋಕನ ಮಾಡಿಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ, ತನ್ನ ಕೆಲ ನಿಲುವುಗಳನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದೆ. ಈವರೆಗೆ ಜನರ ನಡುವೆ ಜನಸಾಮಾನ್ಯರಂತೆಯೇ ಇರುತ್ತಿದ್ದ ಪಕ್ಷದ ಶಾಸಕರು ಇನ್ನು ಆ ಹಣೆಪಟ್ಟಿ ಕಳಚಿ ‘ವಿಐಪಿ ಲುಕ್’ನಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.
ಇತ್ತೀಚಿನ ಪಾಲಿಕೆ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಗಳು ವಿಐಪಿ ಲುಕ್ನಲ್ಲಿ ಕಾಣಿಸಿಕೊಳ್ಳದೇ ಜನಸಾಮಾನ್ಯರ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಲು ಜನ ವಿಫಲರಾದರು ಎಂದು ಆತ್ಮಾವಲೋಕನ ಸಭೆಯಲ್ಲಿ ಬಹುತೇಕರು ಅಭಿಪ್ರಾಯಪಟ್ಟರು. ಶಾಸಕರು ಕೂಡ ಇದಕ್ಕೆ ದನಿಗೂಡಿಸಿದರು.
ಹೀಗಾಗಿ ಶಾಸಕರು ಇನ್ನು ಮುಂದೆ ಜನಸಾಮಾನ್ಯರ ಲುಕ್ನಲ್ಲಿ ಕಾಣಿಸಿಕೊಳ್ಳಬಾರದು. ಜನರು ಗುರುತಿಸುವಂತೆ ವಿವಿಐಪಿ ರಾಜಕಾರಣಿಗಳ ರೀತಿ ಗರಿಗರಿ ಖಾದಿ ದಿರಿಸು ಧರಿಸಬೇಕು. ಕನಿಷ್ಠ 4 ಪಟಾಲಂಗಳ ಜೊತೆ ಕ್ಷೇತ್ರ ಸುತ್ತಬೇಕು ಎಂದು ನಿರ್ಧರಿಸಲಾಗಿದೆ.
‘ಇದು ಒಂಥರಾ ಮೋಜಿನ ನಿರ್ಧಾರ. ಆದರೆ ಸತ್ಯ. ಶಾಸಕರು ಕ್ಷೇತ್ರ ಸಂಚರಿಸುವಾಗ ಜನ ಗುರುತಿಸುವಂತಾಗಲು ನಾಲ್ವರು ಹಿಂಬಾಲಕರು ಜೊತೆಯಲ್ಲೇ ಇರಬೇಕು. ಶಾಸಕರು ಇನ್ನುಮುಂದೆ ಕಡ್ಡಾಯವಾಗಿ ಆಮ್ ಆದ್ಮಿ ಟೋಪಿ (ಗಾಂ ಟೋಪಿ) ಹಾಕಬೇಕು ಎಂದು ನಿರ್ಧರಿಸಲಾಗಿದೆ’ ಎಂದು ಪಕ್ಷದ ಸ್ಟಾರ್ ಶಾಸಕಿ ಅಲಕಾ ಲಾಂಬಾ ಹೇಳಿದರು.
