ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ| ಬೆಂಗಳೂರಿನಲ್ಲಿ ಸೆ.144 ಜಾರಿ| ಇಂದು ಸಂಜೆ 6 ಗಂಡೆಯಿಂದಲೇ ನಗರದಾದ್ಯಂತ ಪಬ್, ಬಾರ್’ಗಳು ಬಂದ್| ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಘೋಷಣೆ| ಕ್ಲಿಷ್ಟ ಪರಿಸ್ಥಿತಿ ಎದುರಿಸಲು ಪೊಲೀಸ್ ಇಲಾಖೆ ಸನ್ನದ್ಧ|

ಬೆಂಗಳೂರು(ಜು.23): ಬೆಂಗಳೂರಿನಲ್ಲಿ ಸೆ. 144 ಜಾರಿಯಾಗಿದ್ದು, ಇಂದು ಸಂಜೆ 6 ಗಂಡೆಯಿಂದಲೇ ನಗರದಾದ್ಯಂತ ಪಬ್, ಬಾರ್’ಗಳು ಬಂದ್ ಇರಲಿವೆ.

ರಾಜ್ಯ ರಾಜಕಾರಣದ ವಿಪ್ಲವ ಮತ್ತು ಬೆಂಗಳೂರಿನಲ್ಲಿ ರಾಜಕೀಯ ಪಕ್ಷಗಳ ಕರ್ಯಕರ್ತರ ಜಟಾಪಟಿ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಸೆ.144 ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಘೋಷಿಸಿದ್ದಾರೆ.

Scroll to load tweet…

ಈಗಾಗಲೇ ವಿಧಾನಸಭೆ ಬಳಿ ಸೆ.144 ಜಾರಿಯಲ್ಲಿದ್ದು, ಈಗ ಆದೇಶವನ್ನು ಇಡೀ ನಗರಕ್ಕೆ ಅನ್ವಯಿಸಲಾಗಿದೆ ಎಂದು ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುತ್ತಿದ್ದು, ಸರ್ಕಾರ ಬಿದ್ದರೆ ಎದುರಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ನಗರ ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ.