ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್’ಗೆ ಅಂತರಾಷ್ಟ್ರೀಯ ನ್ಯಾಯಾಲಯ ರಿಲೀಫ್ ನೀಡಿದೆ. ಅವರ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿದೆ. ಅಂತಿಮ ತೀರ್ಪು ಬರುವವರೆಗೆ ಜಾಧವ್'ಗೆ ಗಲ್ಲುಶಿಕ್ಷೆ ಜಾರಿ ಇಲ್ಲವೆಂದು ನ್ಯಾಯಾಲಯ ಮಹತ್ತರ ತೀರ್ಪು ನೀಡಿದೆ.

ನವದೆಹಲಿ (ಮೇ.18): ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್’ಗೆ ಅಂತರಾಷ್ಟ್ರೀಯ ನ್ಯಾಯಾಲಯ ರಿಲೀಫ್ ನೀಡಿದೆ. ಅವರ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿದೆ. ಅಂತಿಮ ತೀರ್ಪು ಬರುವವರೆಗೆ ಜಾಧವ್'ಗೆ ಗಲ್ಲುಶಿಕ್ಷೆ ಜಾರಿ ಇಲ್ಲವೆಂದು ನ್ಯಾಯಾಲಯ ಮಹತ್ತರ ತೀರ್ಪು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡೂ ದೇಶಗಳಿಗೂ ಪ್ರತಿಷ್ಠೆ ಪ್ರಕರಣವಾಗಿದ್ದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ನ್ಯಾ. ರೋನಿ ಅಬ್ರಾಹಿಂ ನೇತೃತ್ವದ 16 ನ್ಯಾಯಮೂರ್ತಿಗಳ ಪೀಠವು ಈ ಮಹತ್ತರವಾದ ತೀರ್ಪನ್ನು ನೀಡಿದೆ. ಭಾರತದ ಪರ ಖ್ಯಾತ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಭಾರತದ ವಾದಕ್ಕೆ ಅಂತರಾಷ್ಟ್ರೀಯ ನ್ಯಾಯಾಲಯ ಮನ್ನಣೆ ನೀಡಿದೆ.

ಪಾಕಿಸ್ತಾನ ಭಾರತಕ್ಕೆ ಕುಲಭೂಷಣ್ ಜಾಧವ್ ರಾಜತಾಂತ್ರಿಕ ಭೇಟಿಗೆ ಅವಕಾಶ ನೀಡಬೇಕಿತ್ತು. ಭೇಟಿಗೆ ಅವಕಾಶ ನೀಡದೇ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಭಾರತದ ಮನವಿಯನ್ನು ಅಂತರಾಷ್ಟ್ರೀಯ ನ್ಯಾಯಾಲಯ ಎತ್ತಿ ಹಿಡಿದಿದೆ. ಅಂತಿಮ ತೀರ್ಪು ಬರುವವರೆಗೆ ಜಾಧವ್ ಗೆ ಗಲ್ಲುಶಿಕ್ಷೆ ಜಾರಿ ಇಲ್ಲವೆಂದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.