ಬಿಜೆಪಿ ಮುಖಂಡ ಆರ್. ಅಶೋಕ್‌ಗೆ ಎದುರಾಗಿದೆ ಸಂಕಟ

CID to probe Marco Polo bus purchase irregularities
Highlights

ಅಧಿಕಾರಿಗಳ ತೀವ್ರ ಆಕ್ಷೇಪದ ನಡುವೆಯೂ ಬಿಜೆಪಿ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆದಿದ್ದ ‘ಮಾರ್ಕೊಪೋಲೊ ಬಸ್‌ ಖರೀದಿ ಹಗರಣ’ವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಈ ಮೂಲಕ ಮಾಜಿ ಸಾರಿಗೆ ಸಚಿವ ಆರ್‌. ಅಶೋಕ್‌ರನ್ನು ಕಟ್ಟಿಹಾಕಲು ಮತ್ತೊಂದು ತಂತ್ರ ಹೆಣೆದಿದೆ.

ಬೆಂಗಳೂರು : ಅಧಿಕಾರಿಗಳ ತೀವ್ರ ಆಕ್ಷೇಪದ ನಡುವೆಯೂ ಬಿಜೆಪಿ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆದಿದ್ದ ‘ಮಾರ್ಕೊಪೋಲೊ ಬಸ್‌ ಖರೀದಿ ಹಗರಣ’ವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಈ ಮೂಲಕ ಮಾಜಿ ಸಾರಿಗೆ ಸಚಿವ ಆರ್‌. ಅಶೋಕ್‌ರನ್ನು ಕಟ್ಟಿಹಾಕಲು ಮತ್ತೊಂದು ತಂತ್ರ ಹೆಣೆದಿದೆ.

ಮಾರ್ಕೋಪೋಲೋ ಬಸ್‌ ಗುಣಮಟ್ಟಉತ್ತಮವಾಗಿಲ್ಲ, ಬೆಲೆಯೂ ದುಬಾರಿ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರೂ ಸಹ ಹಿಂದಿನ ಬಿಜೆಪಿ ಅವಧಿಯಲ್ಲಿ ಬಿಎಂಟಿಸಿ ಖರೀದಿಸಿದ್ದ 98 ಮಾರ್ಕೊಪೋಲೊ ಬಸ್ಸುಗಳು ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದವು. ಹಿಂಬದಿ ಇಂಜಿನ್‌ನ ಬಸ್ಸುಗಳು ತಾಂತ್ರಿಕ ವೈಫಲ್ಯದಿಂದ ಕೂಡಿದ್ದವು. ಇವು ವಿಶೇಷ ಬಸ್ಸುಗಳಾಗಿದ್ದರೂ ಸಾಮಾನ್ಯ ಪ್ರಯಾಣ ದರದಲ್ಲಿ ಓಡಿಸಲಾಗಿತ್ತು. ಈ ಬಸ್‌ಗಳ ಸಂಚಾರದಿಂದ ನಾಲ್ಕು ವರ್ಷಗಳಲ್ಲಿ ಬಿಎಂಟಿಸಿಗೆ 30 ಕೋಟಿ ರು. ನಷ್ಟಉಂಟಾಗಿತ್ತು. 8 ವರ್ಷಗಳ ಕಾಲ ಬಸ್ಸು ಓಡಿಸಬೇಕು ಎಂಬ ಒಪ್ಪಂದದ ಹಿನ್ನೆಲೆಯಲ್ಲಿ ಬಿಎಂಟಿಸಿ ಸಾಕಷ್ಟುನಷ್ಟಅನುಭವಿಸಿದೆ ಎಂದು ಬಿಎಂಟಿಸಿ ಆಂತರಿಕ ವರದಿಯಿಂದ ಬಯಲಾಗಿತ್ತು. ಈ ವರದಿ ಆಧಾರದ ಮೇಲೆ ಯಥಾವತ್ತಾಗಿ ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿದೆ.

ಈ ಬಗ್ಗೆ ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, ಬಿಎಂಟಿಸಿಗೆ 98 ಮಾರ್ಕೊಪೋಲೋ ಬಸ್ಸು ಖರೀದಿ ಮಾಡಲಾಗಿತ್ತು. ಈ ಖರೀದಿ ಒಪ್ಪಂದದಿಂದ ಬಿಎಂಟಿಸಿಗೆ ತೀವ್ರ ನಷ್ಟಉಂಟಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖಾ ವರದಿಯನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿದೆ ಎಂದು ಹೇಳಿದರು.

ಏನಿದು ಅಕ್ರಮ?

ಆರ್‌.ಅಶೋಕ್‌ ಸಚಿವರಾಗಿದ್ದಾಗ ಜೆ.ಎನ್‌.ನಮ್‌ರ್‍ ಯೋಜನೆಯಡಿ ಬಸ್ಸುಗಳನ್ನು 2008-09ನೇ ಸಾಲಿನಲ್ಲಿ ಖರೀದಿ ಮಾಡಲಾಗಿತ್ತು. ಖರೀದಿಗೆ ಕೇಂದ್ರ ಸರ್ಕಾರದ ಶೇ.35, ರಾಜ್ಯ ಸರ್ಕಾರದ ಶೇ.15 ಅನುದಾನ ಸಿಕ್ಕಿತ್ತು. ಉಳಿದ ಶೇ.50 ಮೊತ್ತವನ್ನು ಬಿಎಂಟಿಸಿ ಭರಿಸಿತ್ತು. ಪ್ರತಿ ಬಸ್‌ಗೆ 31 ಲಕ್ಷ ರು. ನೀಡಿ ಖರೀದಿ ಮಾಡಲಾಗಿತ್ತು.

ಒಟ್ಟು 98 ಬಸ್‌ಗಳ ಖರೀದಿಗೆ 31 ಕೋಟಿ ಖರ್ಚು ಮಾಡಲಾಗಿತ್ತು. ಈ ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಆರಂಭದಿಂದಲೇ ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಹೆಚ್ಚು ಹೊಗೆ ಉಗುಳುತ್ತವೆ ಎಂಬ ಕಾರಣಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿತ್ತು. ಮೈಲೇಜ್‌ ಕಡಿಮೆ, ಹೊಗೆ ಜಾಸ್ತಿ ಬರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಟಾಟಾ ಕಂಪನಿಯೇ ಉಚಿತವಾಗಿ 96 ಬಸ್‌ಗಳ ಎಂಜಿನ್‌ ಬದಲಿಸಿತ್ತು. ಬಿಎಂಟಿಸಿ ಪ್ರಯಾಣ ದರವನ್ನು ಶೇ.50ರಷ್ಟುಕಡಿಮೆ ಮಾಡಿದರೂ ಸಾರ್ವಜನಿಕರು ಈ ಬಸ್ಸು ಬಳಸುತ್ತಿರಲಿಲ್ಲ ಎಂದು ಹೇಳಲಾಗಿತ್ತು. ಹೀಗಾಗಿ ಬಿಎಂಟಿಸಿಗೆ ಪ್ರತಿ ಕಿ.ಮೀ.ಗೆ 27 ರು.ಗಳಷ್ಟುನಷ್ಟವಾಗುತ್ತಿತ್ತು.

loader