ಬೆಂಗಳೂರು (ಡಿ.15): ಮೇಟಿ ರಾಸಲೀಲೆ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಸರ್ಕಾರ ರಾಸಲೀಲೆ ಸಿಡಿ ಬಯಲಾದ ಕೆಲವೇ ಗಂಟೆಗಳಲ್ಲಿ  ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ನೀಡಿದ್ದಾರೆ.

ಆದರೆ ಸಿಐಡಿ ಅಧಿಕಾರಿಗಳಿಗೆ ಗೊಂದಲ ಶುರುವಾಗಿದೆ. ಇದು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸುವಂತಹ ಪ್ರಕರಣವಂತೂ ಅಲ್ಲ. ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ರಾಸಲೀಲೆ ದೃಶ್ಯದಲ್ಲಿರೋ ಮಹಿಳೆ ಹೇಳಿಕೆ ನೀಡಿಲ್ಲ.  ಈಗ ಕೇಸ್​ ದಾಖಲಿಸುವುದು ಯಾರ ಮೇಲೆ. ಯಾವ ಸೆಕ್ಷನ್ ಅಡಿಯಲ್ಲಿ ಎಫ್​ಐರ್ ದಾಖಲಿಸಿಕೊಳ್ಳೋದು ಎಂಬ ಗೊಂದಲದಲ್ಲಿ  ಸಿಲುಕಿಕೊಂಡಿದೆ ಸಿಐಡಿ.

ಎಫ್​ಐಆರ್​ ಇಲ್ಲದೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ. ಬಳಿಕ ಆ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.