Asianet Suvarna News Asianet Suvarna News

ಫ್ಯಾಕ್ಟ್‏ಬುಕ್ ಪ್ರಕಾರ ವಿಹೆಚ್ ಪಿ, ಭಜರಂಗದಳ ಧಾರ್ಮಿಕ ಉಗ್ರಗಾಮಿ ಸಂಘಟನೆ..!

ವಿಹೆಚ್ ಪಿ, ಭಜರಂಗದಳ ಧಾರ್ಮಿಕ ಉಗ್ರಗಾಮಿ ಸಂಘಟನೆ

ಸಿಐಎ ವರ್ಲ್ಡ್ ಫ್ಯಾಕ್ಟ್‏ಬುಕ್‌ನಲ್ಲಿ ಉಲ್ಲೇಖ

ರಾಜಕೀಯ ಹಿತಾಸಕ್ತಿ ಗುಂಪುಗಳ ಪಟ್ಟಿಯಲ್ಲಿ ಆರ್‌ಎಸ್‌ಎಸ್

ಸಿಐಎ ವರದಿಗೆ ಬಿಜೆಪಿ ಕೆಂಡಾಮಂಡಲ

CIA names VHP, Bajrang Dal as ‘religious militant organisations’ in World Factbook

ಫ್ಯಾಕ್ಟ್‏ಬುಕ್ ಪ್ರಕಾರ ವಿಹೆಚ್ ಪಿ, ಭಜರಂಗದಳ ಧಾರ್ಮಿಕ ಉಗ್ರಗಾಮಿ ಸಂಘಟನೆ..!

ನವದಹೆಲಿ(ಜೂ.15): ಅಮೆರಿಕದ  ಕೇಂದ್ರೀಯ ಗುಪ್ತಚರ ಸಂಸ್ಥೆ- ಸಿಐಎ ಇತ್ತೀಚಿಗೆ ಪ್ರಕಟಿಸಿದ  ವರ್ಲ್ಡ್ ಫ್ಯಾಕ್ಟ್‏ಬುಕ್‌ನಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು' ಎಂದು ಹೆಸರಿಸಿದೆ.

ಸಿಐಎ ಅಮೆರಿಕಾ ಸರ್ಕಾರದ ಗುಪ್ತಚರ ಸಂಸ್ಥೆಯ ಒಂದು ಭಾಗವಾಗಿದ್ದು, ವಿಹೆಚ್‌ಪಿ ಹಾಗೂ ಬಜರಂಗ ದಳ ರಾಜಕೀಯ ಹಿತಾಸಕ್ತಿಯ ಗುಂಪುಗಳೆಂದು ವರ್ಗಕರಿಸಲಾಗಿದೆ. ಈ ಗುಂಪಿನ ನಾಯಕರು  ಚುನಾವಣೆಗೆ ನಿಲ್ಲುವುದಿಲ್ಲ ಆದರೂ, ರಾಜಕೀಯದಲ್ಲಿ ತೊಡಗಿಸಿಕೊಂಡಿರುತ್ತಾರೆ ಅಥವಾ ರಾಜಕೀಯ ಒತ್ತಡವನ್ನುಂಟು ಮಾಡಿ ತಮ್ಮ ಗುರಿ ಸಾಧಿಸಿಕೊಳ್ಳುತ್ತಾರೆ ಎಂದು ಫ್ಯಾಕ್ಟ್‏ಬುಕ್‌ನಲ್ಲಿ ವಿವರಿಸಲಾಗಿದೆ.

ಇದೇ ವೇಳೆ ಭಾರತದಲ್ಲಿನ  ರಾಜಕೀಯ ಹಿತಾಸಕ್ತಿ ಗುಂಪುಗಳ ಪಟ್ಟಿಯಲ್ಲಿ ಆರ್‌ಎಸ್‌ಎಸ್ ರಾಷ್ಟ್ರೀಯವಾಧಿ ಸಂಘಟನೆ , ಹುರಿಯತ್ ಕಾನ್ಪರೆನ್ಸ್ ಪ್ರತೇಕತಾವಾದಿ ಗುಂಪು,  ಜಮಾಯಿತ್ ಉಲೇಮಾ ಇ- ಹಿಂದ್ ಧಾರ್ಮಿಕ ಸಂಘಟನೆ ಎಂದು ಅರ್ಥೈಹಿಸಲಾಗಿದೆ. ಇನ್ನು ಸಿಐಎ ಸಮರ್ಥನೆಯನ್ನು ಬಿಜೆಪಿ ಸಂವಾದ ಘಟಕದ ಮಾಜಿ ರಾಷ್ಟ್ರೀಯ  ಸಂಚಾಲಕ  ಖೇಮ್ ಚಂದ್ ಶರ್ಮಾ ತಿರಸ್ಕರಿಸಿದ್ದು, ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಸಿಎಐ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.

ಸಿಐಎ ವಾರ್ಷಿಕವಾಗಿ ವರ್ಲ್ಡ್ ಫ್ಯಾಕ್ಟ್‏ಬುಕ್  ಪ್ರಕಟಿಸುತ್ತದೆ, ಇದು  ಯಾವುದಾದರೊಂದು  ದೇಶದಲ್ಲಿನ ಗುಪ್ತಚರ ಅಥವಾ ವಾಸ್ತವಿಕ ವರದಿಯನ್ನು ಯು.ಎಸ್. ಸರ್ಕಾರಕ್ಕೆ ನೀಡುತ್ತಿದೆ. ಆ ದೇಶದ ಇತಿಹಾಸ, ಜನತೆ, ಸರ್ಕಾರ, ಆರ್ಥಿಕ, ಇಂಧನ, ಭೌಗೋಳಿಕತೆ, ಸಾರಿಗೆ ಮತ್ತು ಸಂವಹನ, ರಕ್ಷಣಾ ವ್ಯವಸ್ಥೆ, ಮತ್ತಿತರ ಬಹು ಹಂತದ ವಿಷಯಗಳನ್ನು ಇದು ಒಳಗೊಂಡಿರುತ್ತದೆ.

Follow Us:
Download App:
  • android
  • ios