ಮಹಾನವಮಿ ಹಬ್ಬಕ್ಕೆ ಸರ್ಕಾರಿ ರಜೆ ಇದ್ದರೂ, ಕ್ರಿಶ್ಚಿಯನ್ ಶಾಲೆಗಳು ರಜೆ ನೀಡದೇ ಉದ್ಧಟತನ ಮೆರೆದಿವೆ. ಬೆಂಗಳೂರಿನ ಕೆಲ ಕ್ರಿಶ್ಚಿಯನ್ ಚಾರಿಟೆಬಲ್ ಟ್ರಸ್ಟ್'ನ ಮಾಲೀಕತ್ವದ ಶಾಲೆಗಳು ಮತ್ತು ಮಂಗಳೂರಿನ ಫಾಧರ್ ಮುಲ್ಲರ್ ಶಾಲೆಯ ಮಕ್ಕಳಿಗೆ ವಿಜಯ ದಶಮಿ ಹಾಗೂ ಆಯುಧ ಪೂಜೆ ಹಬ್ಬದ ಸಂಭ್ರಮ ಇಲ್ಲ.
ಬೆಂಗಳೂರು (ಸೆ.27): ಮಹಾನವಮಿ ಹಬ್ಬಕ್ಕೆ ಸರ್ಕಾರಿ ರಜೆ ಇದ್ದರೂ, ಕ್ರಿಶ್ಚಿಯನ್ ಶಾಲೆಗಳು ರಜೆ ನೀಡದೇ ಉದ್ಧಟತನ ಮೆರೆದಿವೆ. ಬೆಂಗಳೂರಿನ ಕೆಲ ಕ್ರಿಶ್ಚಿಯನ್ ಚಾರಿಟೆಬಲ್ ಟ್ರಸ್ಟ್'ನ ಮಾಲೀಕತ್ವದ ಶಾಲೆಗಳು ಮತ್ತು ಮಂಗಳೂರಿನ ಫಾಧರ್ ಮುಲ್ಲರ್ ಶಾಲೆಯ ಮಕ್ಕಳಿಗೆ ವಿಜಯ ದಶಮಿ ಹಾಗೂ ಆಯುಧ ಪೂಜೆ ಹಬ್ಬದ ಸಂಭ್ರಮ ಇಲ್ಲ.
ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ರಜೆ ಪಟ್ಟಿ ಬಿಡುಗಡೆ ಮಾಡಿದ್ದು, ಮಹಾನವಮಿಗೆ ರಜೆ ನೀಡಿಲ್ಲ. ಮಹಾನವಮಿ ರಾಜ್ಯ ಅಷ್ಟೆ ಅಲ್ಲ ಇಡೀ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ರಜೆ ವಿಷಯದಲ್ಲಿ ತಾರತಮ್ಯದ ಮೂಲಕ ಮಕ್ಕಳಲ್ಲಿ ಧಾರ್ಮಿಕ ವಿಷ ಬೀಜ ಬಿತ್ತಲು ಮುಂದಾಗಿದೆ ಎಂದು ಆರೋಪ ಕೇಳಿ ಬಂದಿದೆ. ಇನ್ನು ಕ್ರಿಶ್ಚಿಯನ್ ಶಾಲೆಗಳ ಈ ಉದ್ಘಟತನಕ್ಕೆ ಹಿಂದೂ ಹೋರಾಟಗಾರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ವಿಜಯದಶಮಿ ಅಂದು ಶಾಲೆಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿವೆ.
