ಮುಂಬೈ(ಸೆ.10): ವಿಂಡೀಸ್ನ ಸ್ಪೋಟಕ ಆಟಗಾರ ಕ್ರಿಸ್ಗೇಲ್ ತಮ್ಮ ಆತ್ಮಚರಿತ್ರೆ 'ಸಿಕ್ಸ್ ಮಶಿನ್' ಪುಸ್ತಕವನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೇಲ್, ಕ್ರಿಕೆಟ್ನಲ್ಲಿ ರಂಜಿಸಿದಂತೆ ಪುಸ್ತಕದಲ್ಲೂ ರಂಜಿಸುವ ಕೆಲಸ ಮಾಡಿದ್ದೇನೆ, ಜನರು ಓದಿ ಅದಕ್ಕೆ ಪ್ರತಿಕ್ರೀಯೆ ನೀಡ ಬೇಕೆಂದು ಬಯಸಿದ್ದಾರೆ.
ಕ್ರಿಸ್ಗೇಲ್ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಭಾರತದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಗೇಲ್'ಗೆ ಶುಭಕೋರಿದ್ದಾರೆ.
ಗೇಲ್ ಈ ಪುಸಕ್ತದಲ್ಲಿ ತಮ್ಮ ವೃತ್ತಿ ಜೀವನದ ಬಗ್ಗೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ಅನೇಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಇದಲ್ಲದೇ ಟೀಮ್ ಇಂಡಿಯಾ ಹಾಗೂ ಐಪಿಎಲ್ ನೊಂದಿಗಿನ ಸಂಬಂಧವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
