ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌'ನ್ನು ತುರ್ತಾಗಿ ಭೂಸ್ಪರ್ಶ ಮಾಡಿಸಬೇಕಾದ ಅನಿವಾರ್ಯತೆ ಶನಿವಾರ ಎದುರಾಯಿತು. ನಾಸಿಕ್‌ನಿಂದ ಔರಾಂಗಾಬಾದ್‌ಗೆ ಹೊರಟಿದ್ದ ಹೆಲಿಕಾಪ್ಟರ್‌ನಲ್ಲಿ ಮಿತಿಮೀರಿದ ತೂಕ ಇದ್ದುದರಿಂದ, ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಮತ್ತೆ ಭೂಸ್ಪರ್ಶ ಮಾಡಿತು.
ಮುಂಬೈ(ಡಿ.10): ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್'ನ್ನು ತುರ್ತಾಗಿ ಭೂಸ್ಪರ್ಶ ಮಾಡಿಸಬೇಕಾದ ಅನಿವಾರ್ಯತೆ ಶನಿವಾರ ಎದುರಾಯಿತು. ನಾಸಿಕ್ನಿಂದ ಔರಾಂಗಾಬಾದ್ಗೆ ಹೊರಟಿದ್ದ ಹೆಲಿಕಾಪ್ಟರ್ನಲ್ಲಿ ಮಿತಿಮೀರಿದ ತೂಕ ಇದ್ದುದರಿಂದ, ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಮತ್ತೆ ಭೂಸ್ಪರ್ಶ ಮಾಡಿತು.
ಆಗ ಫಡ್ನವೀಸ್ ಜತೆಗಿದ್ದ ಅವರ ಅಡುಗೆಭಟ್ಟ ಹಾಗೂ ಅವರ ಕೆಲವು ಸಾಮಗ್ರಿಗಳನ್ನು ಕೆಳಗಿಳಿಸಿದ ಬಳಿಕ ಮತ್ತೆ ಹೆಲಿಕಾಪ್ಟರ್ ಯಶಸ್ವಿಯಾಗಿ ಹಾರಿತು ಎಂದು ಮೂಲಗಳು ಹೇಳಿವೆ. ಈ ಹಿಂದೆಯೂ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗಳು 2 ಬಾರಿ ಅಪಘಾತಕ್ಕೆ ಈಡಾಗಿ ದೊಡ್ಡ ಸುದ್ದಿಯಾಗಿತ್ತು.
